ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಸಚಿವೆಯಾಗಿ ಬಿ.ವಿ. ಸರೋಜಾ ಅಧಿಕಾರ ಸ್ವೀಕಾರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಸಚಿವೆಯಾಗಿ ಬಿ.ಬಿ. ಸರೋಜಾ Davanagere university Administration Registrar B V Saroja ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಇದುವರೆಗೆ ಹಿರಿಯೂರಿನಲ್ಲಿ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರೋಜಾ ಅವರು ಅಲ್ಲಿಂದ ಬಿಡುಗಡೆಯಾಗಿ, ಸಂಜೆ ಅಧಿಕಾರ ಸ್ವೀಕರಿಸಿದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಅವರು ಸರೋಜಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿ ಪ್ರೊ. ಪಿ. ಲಕ್ಷ್ಮಣ, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ, ಡೀನ್ ರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು ನೂತನ ಕುಲಸಚಿವರನ್ನು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ನೂತನ ಕುಲಸಚಿವೆ ಸರೋಜಾ ಅವರನ್ನು ದಾವಣಗೆರೆ ವಿ.ವಿ. ಪ್ರಾಧ್ಯಾಪಕರ ಸಂಘದ ವತಿಯಿಂದ ಅಧ್ಯಕ್ಷ ಡಾ. ಎಚ್.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಪ್ರೊ. ಜೆ.ಕೆ.ರಾಜು, ಉಪಾಧ್ಯಕ್ಷರಾದ ಪ್ರೊ. ಗೋಪಿನಾಥ, ಪ್ರೊ. ರವಿಕುಮಾರ ಪಾಟೀಲ, ಪ್ರೊ. ಮಹಾಬಲೇಶ್ವರ, ಡಾ. ಲೋಕೇಶ್, ಡಾ. ಸುನೀತಾ, ಡಾ. ಶಿವಲಿಂಗಪ್ಪ, ಡಾ. ಮಲ್ಲಿಕಾರ್ಜುನ, ಡಾ. ಆಸೀಫ್ ಉಲ್ಲಾ ಮತ್ತಿತರರು ಅಭಿನಂದಿಸಿದರು.