ಹೊಸ ಕಾಲೇಜು ಕೋರ್ಸ್ ಪ್ರಾರಂಭಕ್ಕೆ ಸಂಯೋಜನಾ ಅರ್ಜಿ ಆಹ್ವಾನ

aplication

ದಾವಣಗೆರೆ : ವಿಶ್ವವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಹಾಗೂ ಇನ್ನಾವುದೇ ಸಾಂಪ್ರದಾಯಿಕ ವಿಷಯಗಳಲ್ಲಿ ಪದವಿ ಕಾಲೇಜುಗಳನ್ನು ರಾಜ್ಯ ಸರ್ಕಾರದ/ ವಿಶ್ವವಿದ್ಯಾನಿಲಯದ ಅನುದಾನದ ಅಪೇಕ್ಷೆ ಇಲ್ಲದೆ ಪ್ರಾರಂಭಿಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ ಸೊಸೈಟಿ/ ಸಾರ್ವಜನಿಕ ಟ್ರಸ್ಟ್/ಸಂಸ್ಥೆಗಳಿ0ದ ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ವಿಶ್ವವಿದ್ಯಾನಿಲಯದ ಸಂಯೋಜನೆ ಹೊಂದಿರುವ ಕಾಲೇಜುಗಳು ತಮ್ಮ ಕಾಲೇಜುಗಳ ಮುಂದುವರಿಕೆ ಸಂಯೋಜನೆ, ನವೀನ ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆ ಪರಿಶೀಲನೆ, ಶಾಶ್ವತ ಸಂಯೋಜನೆ ನವೀಕರಣ, ಹೊಸ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ನವೀನ ಸಂಯೋಜನೆ, ಹೊಸ ಐಚ್ಛಿಕ ವಿಷಯ ಸಮೂಹ, ಹೊಸ ಭಾಷಾ ವಿಷಯಗಳ ನವೀನ ಸಂಯೋಜನೆ, ವಿದ್ಯಾರ್ಥಿ ಪ್ರಮಾಣದ ವಿಸ್ತರಣೆ, ಕಾಲೇಜಿನ ಹೆಸರು ಬದಲಾವಣೆ, ಸ್ಥಳ ಬದಲಾವಣೆ, ಸಹ ಶಿಕ್ಷಣ ಕಾಲೇಜಾಗಿ ಪರಿವರ್ತಿಸಲು ಮುಂತಾದವುಗಳಿಗೆ ಸಂಬ0ಧಿಸಿದ0ತೆ 2022-23ನೇ ಶೈಕ್ಷಣಿಕ ವರ್ಷಕ್ಕಾಗಿ ಸಂಯೋಜನಾ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಅಧಿಕೃತ ಅಂತರ್ಜಾಲ ವೆಬ್‌ಸೈಟ್  http://onlineaffiliation.karnataka.gov.in/Affiliation22_23/ ನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!