2022-23ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ವಿತರಣೆಗೆ ಸುತ್ತೋಲೆ

textbook

ದಾವಣಗೆರೆ: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಕೂಡಲೇ ಪಠ್ಯ ಪುಸ್ತಕಗಳನ್ನು ಲಭ್ಯಗೊಳಿಸಬೇಕಾಗಿರುವುದರಿಂದ, ಈಗಾಗಲೇ ಬ್ಲಾಕ್ ಹಂತಕ್ಕೆ ಸರಬರಾಜಾಗಿರುವ ಎಲ್ಲಾ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಗೆ ಅನುಗುಣವಾಗಿ ತಕ್ಷಣದಿಂದಲೇ ಆಯಾ ಶಾಲೆಗಳಿಗೆ ಸಾಗಾಣಿಕೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಮೇ, 10ರ 2022ರಂದು ಸುತ್ತೋಲೆ ಹೊರಡಿಸಿದ್ದಾರೆ.

2022-23ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳನ್ನು ವಿತರಣೆ ಮಾಡುವ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಮಾರಾಟ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಯನ್ವಯ ಶೇ.10 ರಷ್ಟು ಮುಂಗಡ ಹಣ ಪಾವತಿಸಿರುವ ಶಾಲೆಗಳು ಶೇ. 100ರಷ್ಟು ಹಣ ಪಾವತಿಸಿದ ನಂತರ ಶೇ.100ರಷ್ಟು ಪಠ್ಯಪುಸ್ತಕಗಳನ್ನು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಇಲಾಖೆಗಳಿಂದ ಅನುಷ್ಠಾನಗೊಂಡಿರುವ ಶಾಲೆಗಳಿಗೆ ಬೇಡಿಕೆಯನ್ವಯ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ಮತ್ತು ಶೇ. 10ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ಅನ್ವಯ ಶೇ.100 ರಷ್ಟು ಹಣ ಪಾವತಿಸಿ ಖರೀದಿಸಲು ಕೋರಿದ್ದಲ್ಲಿ ಅಂತಹ ಖಾಸಗಿ ಶಾಲೆಗಳಿಗೆ ಜೇಷ್ಠತೆ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ವಿತರಿಸಲು ಸೂಚಿಸಿದ್ದಾರೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!