ಹದಡಿ ಸೇರಿದಂತೆ 16 ಗ್ರಾಮಗಳ ಕುಡಿವ ನೀರು ಯೋಜನೆಗೆ ಅನುಮೋದನೆ! ಸರ್ಕಾರದ ಆದೇಶ
ದಾವಣಗೆರೆ: ಜಿಲ್ಲೆಯ ಹದಡಿ ಮತ್ತು ಇತರೆ 16 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಪುನಃಶ್ಚೇತನ ಕಾಮಗಾರಿಯರೂ. 493.00 ಲಕ್ಷ (ನಾಲ್ಕುನೂರ ತೊಂಬತ್ಮೂರು ಲಕ್ಷ ರೂಪಾಯಿ) ಗಳ ಅಂದಾಜು ಮೊತ್ತಕ್ಕೆ ಜಲಜೀವನ್ ಮೀಷನ್ ಕಾರ್ಯಕ್ರಮದಡಿಯಲ್ಲಿ ಅನುಮೋದನೆ ನೀಡಿ ಮಾ. 31ರಂದೇ ಸರ್ಕಾರ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಪದನಿಮಿತ್ತ ಉಪಕಾರ್ಯದರ್ಶಿ (ಅಭಿವೃದ್ದಿ), ಪ್ರಸ್ತಾಪಿತ ಕಾಮಗಾರಿಗೆ ಸಕ್ಷಮ ಪ್ರಾಧಿಕಾರದಿಂದ ಅವಶ್ಯವಿರುವ ಅನುಮೋದನೆ ಪಡೆದು ನಂತರ ಮುಂದಿನ ಕ್ರಮವಹಿಸಬೇಕು. ಅನುಮೋದನೆ ನೀಡಲಾದ ಅಂದಾಜಿನ ವ್ಯಾಪ್ತಿಯೊಳಗೆ ಕಾಮಗಾರಿಯನ್ನು ಅನುಷ್ಠಾನಗೊಳಿಸತಕ್ಕದ್ದು ಹಾಗೂ ಅಂದಾಜು ಮೊತ್ತದಲ್ಲಿ ಯಾವುದೇ ರೀತಿಯ ಹೆಚ್ಚಳಕ್ಕೆ ಆಸ್ಪದ ನೀಡಬಾರದು ಎಂದು ಸೂಚಿಸಿದ್ದಾರೆ. ಅಷ್ಟೇಅಲ್ಲದೆ ಈ ಆದೇಶದಡು ಅನುಮೋದನೆಗೊಂಡ ಕುಡಿಯುವ ನೀರಿನ ಯೋಜನೆಯ ಅಂದಾಜು ಮೊತ್ತದ ವ್ಯಾಪ್ತಿಯೊಳಗೆ ಅಧೀಕ್ಷಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ, ಬೆಂಗಳೂರು ಇವರ ಶಿಫಾರಸ್ಸು ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದರಿ ಯೋಜನೆಯ ಕಾಮಗಾರಿಯಲ್ಲಿ ಹೆಚ್ಚುವರಿಯಾಗಿ 3 ಗ್ರಾಮಗಳಾದ ಹನುಮನಹಳ್ಳಿ, ಗೋಪನಾಳ್ ಮತ್ತು ಚಿಕ್ಕತೊಗಲೇರಿ ಗ್ರಾಮಗಳನ್ನು ಸೇರಿಸಿಕೊಂಡು ಯೋಜನೆಯ ಎಲ್ಲಾ ಗ್ರಾಮಗಳಿಗೂ 55 ಐPಅಆ ನೀರನ್ನು ಒದಗಿಸುವುದು, ಪೈಪ್‌ಲೈನ್ ಬದಲಾವಣೆ ಮತ್ತು ಹೆಡ್‌ವರ್ಕ್ಸ್ WಖಿP ಯ ಪುನಶ್ಚೇತನ ಸಲುವಾಗಿ ಅಂದಾಜು ಪಟ್ಟಿಯಲ್ಲಿ ಅನುವು ಮಾಡಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719