ಮೇ.16ರ0ದು ಶಾಲಾರಂಭ! ಶಾಲೆಗಳಲ್ಲಿ ಹಬ್ಬದ ವಾತಾವರಣ?

ದಾವಣಗೆರೆ: 2022-23ನೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಮೇ.16ರಂದು ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಶಿಕ್ಷಕರು ಸಕಲ ಸಿದ್ದತೆ ನಡೆಸಿದ್ದಾರೆ. ಶಾಲೆಗಳ ಕಾರ್ಯಾರಂಭಕ್ಕೂ ಮುನ್ನ ಶಾಲಾ ಹಂತದಲ್ಲಿ ಹಲವು ರೀತಿಯ ಪೂರ್ವಸಿದ್ಧತಾ ಕಾರ್ಯಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಣತಿಯಂತೆ ಕೈಗೊಂಡಿದ್ದು ಇನ್ನೇನು ಶಾಲಾ ಪ್ರಾರಂಭೋತ್ಸವಕ್ಕೆ ಎದುರು ನೋಡುತ್ತಿದ್ದಾರೆ.
ಎಲ್ಲಾ ಶಾಲೆಗಳ ಶಿಕ್ಷಕರು/ಸಿಬ್ಬಂದಿಗಳು, ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅವರ ಅಧೀನ ಕ್ಷೇತ್ರ ಸಿಬ್ಬಂದಿ, ಜಿಲ್ಲಾ ಉಪನಿರ್ದೇಶಕರು, ಎಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಅಧೀನ ಕ್ಷೇತ್ರಸಿಬ್ಬಂದಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಶಾಲೆಯ ಶುಭಾರಂಭದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸರ್ಕಾರ ಸೂಚಿಸಿತ್ತು. ಶಾಲಾ ಪ್ರಾರಂಭದ ಮುನ್ನಾ ದಿನವಾದ ಮೇ.15ರ ಇಂದು ಶಾಲಾವರಣ, ಶಾಲಾ ತರಗತಿ, ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಇತ್ಯಾದಿಗಳನ್ನು ಸ್ವಚ್ಚಗೊಳಿಸಿಟ್ಟುಕೊಳ್ಳುವ, ಶಾಲಾ ಸುರಕ್ಷತೆ, ಶುದ್ಧ ಕುಡಿಯುವ ನೀರು ಪರಿಶೀಲಿಸುವುದು, ಶೌಚಾಲಯಗಳು ಸುಸ್ಥಿತಿ ಇತ್ಯಾದಿ ಶಾಲಾ ಕೆಲಸಗಳನ್ನು ಜಿಲ್ಲೆಯ ಹಲವು ಶಾಲೆಗಳ ಶಿಕ್ಷಕರು ಕೈಗೊಂಡಿದ್ದರು.
ಶಾಲೆಗಳಲ್ಲಿ ಸೃಷ್ಟಿಯಾಗಲಿದೆ ಹಬ್ಬದ ವಾತಾವರಣ!
ಶಾಲಾ ಪ್ರಾರಂಭದ ದಿನ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳು ಇಂದು(ಮೇ.16) ತಳಿರು ತೋರಣ, ರಂಗೋಲಿ ಅಲಂಕಾರ, ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕತಿಕ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿ ಸಮಾರಂಭಗಳ ಮೂಲಕ ಶಾಲೆಗಳಲ್ಲಿ ಹಬ್ಬದ ವಾತಾವರಣ ಏರ್ಪಡಲಿದೆ. ಚನ್ನಗಿರಿ ತಾಲೂಕಿನ ಅರೇಹಳ್ಳಿ-ಕದರನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಂದು ಸ್ವಚ್ಚತೆ ಕಾರ್ಯ ನಡೆದಿದ್ದು, ಶಾಲಾರಂಭಕ್ಕೆ ಕಾದುಕುಳಿತಿದ್ದಾರೆ.
garudavoice21@gmail.com 9740365719