ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಎರಡು ಪುಟದ ಜಾಹೀರಾತು! ಈ ದಾಖಲೆ ಸಲ್ಲಿಸಿ

ದಾವಣಗೆರೆ: ಮಾಧ್ಯಮ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. ಅದರಂತೆ ಇಲಾಖೆ ಮಾಧ್ಯಮ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಆದೇಶದಲ್ಲಿ ತಿಳಿಸಿರುವ ಷರತ್ತಿಗೊಳಪಟ್ಟು ಬಿಡುಗಡೆ ಮಾಡಲು ತಮ್ಮ ಜಿಲ್ಲೆಗಳಿಗೆ ಸಂಬ0ಧಿಸಿದ0ತೆ ಇಲಾಖೆ ಮಾಧ್ಯಮ ಪಟ್ಟಿಯಲ್ಲಿರುವ ಹಾಗೂ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳ ಸಂಪಾದಕರುಗಳಿ0ದ ಕೆಳಕಂಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಂಡು 7 ದಿವಸಗಳ ಒಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಸೂಚಿಸಿ ಮೇ.16,2022ರಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
1. ಆರ್.ಎನ್.ಐ ಪ್ರಮಾಣ ಪತ್ರ (ಪತ್ರಿಕೆಯ ಆರಂಭದಿ0ದ ಇತ್ತಿಚಿನವರೆಗಿನ ಪರಿಷ್ಕೃತ)
2 ಘೋಷಣಾ ಪತ್ರ (Declaration Copy) (ಪತ್ರಿಕೆಯ ಆರಂಭದಿ0ದ ಇತ್ತೀಚಿನವರೆಗಿನ ಪರಿಷ್ಕತ)
3 ಜಾತಿ ಪ್ರಮಾಣ ಪತ್ರ (ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಮತ್ತು ಪ್ರಸ್ತುತ ಚಾಲ್ತಿಯಲ್ಲಿರಬೇಕು)
4. ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ (ಸಕ್ಷಮ ಪ್ರಾಧಿಕಾರಿಗಳಿಂದ ಪಡೆದಿರಬೇಕು)
5. ಕಳೆದ 10 ವರ್ಷಗಳಲ್ಲಿ RNI ಗೆ ಸಲ್ಲಿಸಿರುವ ವಾರ್ಷಿಕ ವರದಿ (ಕಡ್ಡಾಯ)
6. 10 ವರ್ಷಗಳ ಆದಾಯ ತೆರಿಗೆ ವಿವರ
( income tax bill details)
7. ಇತ್ತೀಚಿನ ಒಂದು ತಿಂಗಳ ಪತ್ರಿಕಾ ಸಂಚಿಕೆಗಳು
ಮೇಲ್ಕ0ಡ0ತೆ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಲು ತಿಳಿಸಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದಿದ್ದಲ್ಲಿ, ಮುಂದೆ ಉಂಟಾಗುವ ಪ್ರತಿಕೂಲ ಪರಿಣಾಮಗಳಿಗೆ ಸಂಬ0ಧ ಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.