ಪದವಿ ಪೂರ್ವ ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಣೆ

pu holiday

ದಾವಣಗೆರೆ : ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಮೇ. 20ರಿಂದ ಜೂನ್ 8ರ 2022ರವರೆಗೆ ಬೇಸಿಗೆ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರ ಮೇ. 18ರಂದು ಸುತ್ತೋಲೆ ಹೊರಡಿಸಿದೆ. ಮೇ.20ರಿಂದ ಜೂನ್ 6ರವರೆಗೆ ಒಟ್ಟು 17 ದಿನಗಳ ಬೇಸಿಗೆ ರಜೆಯನ್ನು ಘೋಷಿಸಿರುವ ಸರ್ಕಾರ 2021-22ನೇ ಶೈಕ್ಷಣಿಕ ಸಾಲಿನ ಕೊನೆಯ ಕಾರ್ಯನಿರತ ದಿನ ಮೇ.19 ಆಗಿದೆ ಎಂದು ತಿಳಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ರ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವರ್ಷದ ಕೊನೆಯ ಕಾರ್ಯನಿರತ ದಿನ 30 ಏಪ್ರಿಲ್ 2022 ಎಂದು, 01ನೇ ಮೇ. 2022ರಿಂದ ಬೇಸಿಗೆ ರಜೆ ಪ್ರಾರಂಭ ಎಂದು ಪ್ರಕಟಿಸಲಾಗಿತ್ತು. ಉಲ್ಲೇಖ-02ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು 2022-23ರ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 09ನೇ ಜೂನ್ 2022ರಂದು ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭಿಸಲು ತಿಳಿಸಲಾಗಿದೆ.

ಅಷ್ಟೇಅಲ್ಲದೆ 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು. ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸದೇ ಇರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಹಾಗೂ ಕಾಲೇಜಿನ ಆಡಳಿತಾತ್ಮಕ ಕಾರ್ಯಗಳನ್ನು ಪ್ರಾಂಶುಪಾಲರ ಸೂಚನೆಯ ಮೇರೆಗೆ ನಿರ್ವಹಿಸುವಂತೆ ಸೂಚಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು(ಶೈಕ್ಷಣಿಕ) ಸುತ್ತೋಲೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!