ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ಪ್ರಕರಣ ದಾಖಲಿಸದಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ದಾವಣಗೆರೆ: ನಗರದ ಸಿ.ಸಿ ಕ್ಯಾಮೇರಾಗಳ ದೃಶ್ಯಾವಳಿ ಆಧರಿಸಿ ಸಧ್ಯಕ್ಕೆ ವಾಹನಗಳ ಮೇಲೆ ಪ್ರಕರಣಗಳನ್ನು ಮಾಡದಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ವತಿಯಿಂದ ಮನವಿ ಸಲ್ಲಿಸಲಾಗಿದೆ.
ದಾವಣಗೆರೆ ನಗರದಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮೇರಾಗಳನ್ನು ಆಧರಿಸಿ ವಾಹನಗಳ ಮೇಲೆ ಪ್ರಕರಣವನ್ನು ದಾಖಲಿಸಿ ದಂಡ ವಸೂಲಿ ಮಾಡುವ ಪ್ರಕ್ರಿಯೆಯನ್ನು ಸಧ್ಯದ ಮಟ್ಟಿಗೆ ಕೈಬಿಟ್ಟು ಜನರಲ್ಲಿನ ಅರಿವು ಮೂಡಿಸಿದ ನಂತರ ದಂಡ ವಸೂಲಿ ಮಾಡಬೇಕೆಂದು PEOPLE’S LAWYERS GUILD (ಪೀಪಲ್ಸ್ ಲಾಯರ್ಸ್ ಗಿಲ್ಡ್) ಮನವಿಯನ್ನು ಸಲ್ಲಿಸಿದೆ.
ವಾಸ್ತವದಲ್ಲಿ ಪೊಲೀಸ್ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾನೂನು ಉಲ್ಲಂಘನೆಯಾದರೂ ಕೂಡ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಆದರೆ ದಾವಣಗೆರೆ ನಗರವು Metro Politian ನಗರವಾಗದೆ ಸಾಮಾನ್ಯ ಮಟ್ಟದ ನಗರವಾಗಿದೆ. ದಾವಣಗೆರೆ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಅವಿದ್ಯಾವಂತರು ಓಡಾಡುತ್ತಾರೆ. ಹೀಗಿದ್ದಾಗ ಸಿ.ಸಿ ಕ್ಯಾಮೇರಾಗಳ ಬಗ್ಗೆ ಮತ್ತು ಕಾನೂನಿನ ದುರುಪಯೋಗವಾಗುವ ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಿ ಮಾಹಿತಿಯನ್ನು ನೀಡಿ ಸ್ವಲ್ಪ ದಿನಗಳ ನಂತರದಲ್ಲಿ ಸಿ.ಸಿ ಕ್ಯಾಮೇರಾಗಳನ್ನು ಆಧರಿಸಿ ದಂಡ ಹಾಕುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚಿಗೆ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸರ್ಕಲ್‌ಗಳಿಗೆ ಸಿಗ್ನಲ್‌ಗಳನ್ನು ಮತ್ತು ಸಿ.ಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದೆ. ಇದು ನಮ್ಮ ದಾವಣಗೆರೆ ನಗರವನ್ನು ಒಂದು ಉನ್ನತ ಮಟ್ಟದ ನಗರವನ್ನಾಗಿ ಮಾಡಿದೆ. ಆದರೆ 3 (ಮೂರು) ದಾರಿಗಳು ಕೂಡುವಂತಹ ಸರ್ಕಲ್‌ಗಳಲ್ಲಿ free left ಕೊಡಬೇಕಾದ ಜಾಗದಲ್ಲಿ ಕೊಡಲಿಲ್ಲ. ಪಾದಚಾರಿಗಳಿಗೆ ರಸ್ತೆಯನ್ನು ದಾಟಲು ಸರಿಯಾದzebra crossing ಆಗಲೀ ಅಥವಾ ಪಾದಚಾರಿಗಳಿಗೆ ರಸ್ತೆಯನ್ನು ದಾಟಲು ಸರಿಯಾದ ಸಿಗ್ನಲ್ ವೈಜ್ಞಾನಿಕವಾಗಿ ಅಳವಡಿಸಿರುವುದಿಲ್ಲ. ಅದಲ್ಲದೆ ಪಾದಚಾರಿಗಳು ಸರಿಯಾಗಿ ಓಡಾಡಲು ಕಾಲುದಾರಿ (footpath) ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಮಾಡಿರುವುದಿಲ್ಲ.
ಎರಡು ವರ್ಷಗಳಿಂದ Covid-19ನಿಂದಾಗಿ ಜನಸಾಮಾನ್ಯರು ಆರ್ಥಿಕವಾಗಿ ತುಂಬಾ ತೊಂದರೆಗಳಿಗೆ ಒಳಗಾಗಿದ್ದಾರೆ. ಅಲ್ಲದೆ ಇತ್ತೀಚಿಗೆ ಪೆಟ್ರೋಲ್, ಡೀಸೆಲ್, ದವಸ-ಧಾನ್ಯಗಳು, ಅಡುಗೆ ಎಣ್ಣೆ ಹೀಗೆ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಜೀವನವು ತುಂಬಾ ಕಷ್ಟದಲ್ಲಿದೆ. ಕೆಲವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಹೀಗಿದ್ದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಹೊರೆಯಾಗಬಾರದು. ಹಾಗಾಗಿ ಸಿ.ಸಿ ಕ್ಯಾಮೇರಾದ ದೃಶ್ಯಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಸಧ್ಯದ ಮಟ್ಟಿಗೆ ಮುಂದೂಡಬೇಕೆAದು ಸಾರ್ವಜನಿಕರ ಹಿತದೃಷ್ಠಿಯಿಂದ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಅನೀಸ್ ಪಾಷ, ಮಂಜುನಾಥ, ಅಬ್ದುಲ್ ಸಮದ್, ರುದ್ರೇಶ್, ಗೊವಿಂದರಾಜು ಜೆ.ಟಿ, ನಸ್ರಿನ್ ತಾಜ್, ಮುಸ್ತಾಫಾ ಮತ್ತಿತರರು ಉಪಸ್ಥಿತರಿದ್ದರು.
garudavoice21@gmail.com 9740365719
