2021ರ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಿಕ್ತು ಮೇ.20ರಂದು ಮುಕ್ತಿ! ಐವರು ಆರೋಪಿಗಳು ಅಂದರ್

ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಂದು ಧಾಖಲಾಗಿದ್ದ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಮೇ.20ರಂದು ಮುಕ್ತಿ ಸಿಕ್ಕಿದ್ದು, 5 ಜನ ಆರೋಪಿತರನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಅಸ್ಲಾಂ ಯಾನೆ ಮೊಹಮ್ಮದ್ ಗೌಸ್, 30 ವರ್ಷ, ಚನ್ನಗಿರಿ ಟೌನ್, ಮೊಹಮ್ಮದ್ ಜಮೀರ್, ಎಂಡಿ, 30 ವರ್ಷ, ಚನ್ನಗಿರಿ ಟೌನ್ ಹಾಲಿ ವಾಸ- ಭಾಷಾನಗರ,ದಾವಣಗೆರೆ ನಗರ, ಮುಜಾಯಿದ್, 28 ವರ್ಷ, ಚನ್ನಗಿರಿ ಟೌನ್‌, ಸಿಗತ್ ವುಲ್ಲಾ 30 ವರ್ಷ, ಚನ್ನಗಿರಿ ಟೌನ್, ಪೈರೋಜ್ ಖಾನ್, 32 ವರ್ಷ, ಚನ್ನಗಿರಿ ಟೌನ್ ಇವರುಗಳಿಂದ 4 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 26 ಸಾವಿರ ರೂ. ನಗದು ಹಣ, 01 ಗ್ಯಾಸ್ ಸ್ಟವ್, 01 ಪ್ಲಾಸ್ಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಕಳವು ಪ್ರಕರಣಗಳಲ್ಲಿ ಪ್ರಮುಖವಾಗಿ ಮಾಚನಾಯಕಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಕೋಡಿ ಬಸವೇಶ್ವರ ಸ್ವಾಮಿ ದೇವಸ್ಥಾನ ಅಗರಬನ್ನಿಹಟ್ಟಿ ಗೆ ಸಂಬಂಧಿಸಿದ್ದಾಗಿದೆ.

ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸಂತೋಷ ಕೆ.ಎಂ., ರವರ ಮಾರ್ಗದರ್ಶನದಲ್ಲಿ ಮಧು ಪಿ.ಬಿ, ಪೊಲೀಸ್ ನಿರೀಕ್ಷಕರು ಹಾಗೂ ಚಂದ್ರಶೇಖರ್ ಎನ್, ಪಿ.ಎಸ್.ಐ. ಶ್ರೀಮತಿ ರೂಪ್ಲಿಬಾಯಿ ಚನ್ನಗಿರಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಂಗಪ್ಪ, ನರೇಂದ್ರಸ್ವಾಮಿ, ಮಂಜುನಾಥ್ ಪ್ರಸಾದ್ ರವರನ್ನು ಒಳಗೊಂಡ ತಂಡ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ನೇ ಸಾಲಿನಲ್ಲಿ ದಾಖಲಾಗಿದ್ದ ದೇವಸ್ಥಾನಗಳ ಹುಂಡಿಗಳನ್ನು, ಕಳವು ಮಾಡಿದ್ದ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಈ ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲಿಸ್ ಅಧೀಕ್ಷಕರವರಾದ ಆರ್.ಬಿ,ಬಸರಗಿರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!