ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ! ಮೊದಲ ಟಿಕೇಟ್ ಖರೀದಿ ಮಾಡಿದ ಎಂಪಿಆರ್

ದಾವಣಗೆರೆ: ಹೊನ್ನಾಳಿ ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲಾಗಿದ್ದು, ಬಹುದಿನಗಳ ಬಸ್ ಸೌಲಭ್ಯ ಬೇಡಿಕೆಗೆ ಇಂದು ಮುಕ್ತಿ ಸಿಕ್ಕಿದೆ. ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮದ ವಿದ್ಯಾರ್ಥಿಗಳು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರಿಗೆ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಂಡು ಬಸ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಅಷ್ಟೇಅಲ್ಲದೆ ಖುದ್ದು ಶಾಸಕರೇ ಬಸ್ ಚಾಲನೆ ಮಾಡಿ, ಖುದ್ದು ಅವರೇ ಮೊದಲ ಟಿಕೇಟ್ ಖರೀದಿ ಮಾಡಿದ್ದಾರೆ. ಇನ್ನು ಗ್ರಾಮದಲ್ಲಿ ಬಸ್ ಬಂದಿದ್ದು ನೋಡಿದ ಬೈರನಹಳ್ಳಿ ಗ್ರಾಮಸ್ಥರ, ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
garudavoice21@gmail.com 9740365719

 
                         
                       
                       
                       
                       
                       
                       
                      