ಗಜಗಾತ್ರದ ವಿಚಿತ್ರ ಹಾವಿನ ಹೊಟ್ಟೆಯೊಳಗಿತ್ತು 50 ಮರಿಗಳು!ವೀಡಿಯೋ ವೈರಲ್

snake

ದಾವಣಗೆರೆ: ಗಜಗಾತ್ರದ ಹಾವಿನ ಹೊಟ್ಟೆಯೊಂದರಲ್ಲಿ ಬರೋಬ್ಬರಿ 50 ಮರಿಗಳಿರುವ ಅಪರೂಪದ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ನೋಡಿದ ಜನ ನಿಬ್ಬೇರಗಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಹಂಪನೂರು ಗ್ರಾಮದ ರೈತ ರಾಜಶೇಖರ್ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು ಹಲವು ಆಶ್ಚರ್ಯಕ್ಕೆ ಕಾರಣವಾಗಿದೆ.

ಶನಿವಾರ ಹಂಪನೂರು ಗ್ರಾಮದ ರೈತ ರಾಜಶೇಖರ್ ತಮ್ಮ ಜಮೀನಿನಲ್ಲಿ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡುವ ವೇಳೆ ಗಜಗಾತ್ರದ ವಿಚಿತ್ರ ಜಾತಿಯ ಹಾವೊಂದು ಕಂಡಿದೆ. ಇನ್ನೊಂದೆರೆಡು ಸುತ್ತು ಉಳುಮೆ ಮಾಡಿ ಮತ್ತೆ ನೋಡಿದಾಗಲೂ ಆ ಹಾವು ಅತ್ತಿತ್ತ ಅಲುಗಾಡದೆ ಇದ್ದ ಜಾಗದಲ್ಲೇ ಇದೆ. ಇದನ್ನು ಗಮನಿಸಿದ ರೈತ ಹೆದರಿ ಹೊಲದಿಂದ ಮನೆಗೆ ಹೋಗಿದ್ದಾನೆ. ಇದಾದ ಬಳಿಕ ಮತ್ತೆ ಭಾನುವಾರದಂದು ಜಮೀನು ಉಳುಮೆ ಮಾಡಲು ಬಂದಾಗ ಆ ಹಾವು ಇದ್ದ ಜಾಗದಲ್ಲೇ ಇದೆ. ಇದರಿಂದ ಮತ್ತಷ್ಟು ಹೆದರಿದ ರೈತ ಅಕ್ಕಪಕ್ಕದ ರೈತರನ್ನು ಸಹಾಯಕ್ಕೆ ಕರೆದಿದ್ದಾನೆ. ಜನರು ಗುಂಪುಗೂಡಿ ಹಾವನ್ನು ಗಮನಿಸಿದ್ದಾರೆ. ಹಲುಗಾಡದ ಹಾವನ್ನು ಗಮನಿಸಿದ ಜನರು ಕಣಿಗೆ, ಕೋಲಿನಿಂದ ಅಲುಗಾಡಿಸಿದ್ದಾರೆ. ಆದರೂ ಅಲುಗಾಡದ ಹಾವಿನ ಮೇಲೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಕಲ್ಲನ್ನು ಎತ್ತಿ ಹಾಕಿದ್ದಾನೆ. ಪೆಟ್ಟು ತಿಂದ ಹಾವು ಬುಸುಗುಡುತ್ತಾ ಅಲುಗಾಡಿದಾಗ ಎಲ್ಲರು ಸೇರಿ ಕೋಲು, ಕಣಿಗೆ, ಕಲ್ಲಿನಿಂದ ಹೊಡೆದಿದ್ದಾರೆ.

ಜನರು ಹೊಡೆದ ಏಟಿಗೆ ಹೊಟ್ಟೆಯ ಭಾಗ ಸೀಳಿದ್ದು, ಹೊಟ್ಟೆಯೊಳಗಿಂದ ಹಾವಿನ ಮರಿಗಳು ಹೊರಗೆ ಬಂದಿವೆ. ಒಂದೊ0ದಾಗಿ ಬರುವ ಹಾವಿನ ಮರಿಗಳನ್ನು ನೋಡಿದ ಜನ ಕಣಿಗೆಯಿಂದ ಹಾವಿನ ಹೊಟ್ಟೆಗೆ ಒತ್ತಿದ್ದೇ ತಡ ನಾಮುಂದೆ ತಾಮುಂದೆ ಎಂದು ಹಾವಿನ ಮರಿಗಳು ಹೊಟ್ಟೆಯಿಂದ ಹೊರಬಂದಿದೆ. ಹೊರಬಂದ ಹಾವಿನ ಮರಿಗಳನ್ನು ಎಣಿಸಲಾಗಿದ್ದು, ಬರೋಬ್ಬರಿ 50 ಮರಿಗಳು ಇದ್ದವು. ಒಂದೊ0ದು ಹಾವಿನ ಮರಿಗಳು ಎರಡೂವರೆಯಿಂದ ಮೂರು ಅಡಿ ಉದ್ದ ಇದ್ದವು ಎನ್ನಲಾಗಿದೆ. ಕಲಿಯುಗದ ಈ ವಿಚಿತ್ರ ಸನ್ನಿವೇಶವನ್ನು ನೋಡಲು ಪುರುಷರು, ಮಹಿಳೆಯರು ಮುಗಿಬಿದ್ದಿದ್ದರು.

ರಸೆಲ್ಸ್ ವೈಪರ್ ಹಾವು:
ರಸೆಲ್ಸ್ ವೈಪರ್ ಎಂದು ಕರೆಯಲ್ಪಡುವ ಈ ಹಾವು ಭಯಾನಕ ವಿಷಪೂರಿತ ಜಾತಿಯ ಹಾವು ಎನ್ನಲಾಗಿದೆ. ಕರ್ನಾಟಕದಲ್ಲಿ ಐದು ಜಾತಿಯ ವಿಷಪೂರಿತ ಹಾವುಗಳ ಸಮುದಾಯ ಇದ್ದು, ಇದು ಅತ್ಯಂತುಗ್ರವಾದ ವಿಷವನ್ನು ಕಕ್ಕುತ್ತದೆ. ಇದರ ಕಡಿತದಿಂದ ವ್ಯಕ್ತಿ ರಕ್ತ ಕ್ಷಣಾರ್ಧದಲ್ಲೇ ತೆಳುವಾಗಿ ಮೃತ್ಯು ಬೇಗನೆ ಸಂಭವಿಸುತ್ತದೆ. ಹಳ್ಳಿಗರು ಇದನ್ನು ಬೆಂಜ್ರಿ ಹಾವು ಎಂದು ಕರೆಯುತ್ತಾರಂತೆ. ಇದು ಅಂಡ ಜರಾಯುಜ. ಅಂದರೆ ಹೆಣ್ಣು ಹಾವಿನ ದೇಹದಲ್ಲೇ ಮೊಟ್ಟೆಗಳು ಒಡೆದು ಮರಿಗಳಾಗಿ ನಂತರ ತಾಯಿ ದೇಹದಿಂದ ಹೊರಬರುತ್ತವೆ. 75 ಮರಿಗಳವರೆಗೂ ಇಂತಹ ಹಾವುಗಳು ಮರಿಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡ ಉದಾಹರಣೆಗಳು ಇವೆ. ಇದು ವಿಷದ ಹಾವಾಗಿದ್ದು, ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕಂಡುಬರುತ್ತದೆ. ಇದರ ವಿಷ ರಕ್ತದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ ಹಾವುಗಳು ಕಚ್ಚಿದರೆ ವ್ಯಕ್ತಿಯ ಕಿಡ್ನಿಗಳು ಕೂಡ ವಿಫಲವಾಗುತ್ತದೆ ಎಂದು ಹೇಳಲಾಗುತ್ತದೆ. ಹಾವುಗಳು ಮೊಟ್ಟೆ ಇಡುತ್ತವೆ ಮರಿ ಹಾಕುವುದಿಲ್ಲ ಎಂಬ ನಂಬಿಕೆಗೆ ವಿರುದ್ದವಾಗಿ ನಡೆದಿರುವ ಘಟನೆ ಭಾನುವಾರ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇಅಲ್ಲದೆ ಈ ಘಟನೆ ಆಸಕ್ತರನ್ನು ಚಿಂತಿಸುವ0ತೆ ಮಾಡಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!