ಕರ್ನಾಟಕ ಪ್ರದೇಶ ಕುರುಬ ಸಂಘದಿ0ದ ಧನ್ಯವಾದ

ದಾವಣಗೆರೆ: ರಘುನಾಥರಾವ್ ಮಲ್ಕಾಪೂರೆ ಅವರ ಸೇವಾ ಹಿರಿತನವನ್ನು ಗುರುತಿಸಿ ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ನೇಮಕ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ರಘುನಾಥ್ರಾವ್ ಮಲ್ಕಾಪೂರೆ ಅವರ ಹೆಸರನ್ನು ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಕಾರಣೀಭೂತರಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಕರ್ನಾಟಕ ಪ್ರದೇಶ ಕುರುಬ ಸಂಘದಿ0ದ ತುಂಬುಹೃದಯದ ಧನ್ಯವಾದಗಳನ್ನು ಸಲ್ಲಿಸಲಾಗಿದೆ. ರಘುನಾಥ್ರಾವ್ ಮಲ್ಕಾಪೂರೆ ಅವರು ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆ ಆಗಿರುವುದು ನಾಡಿನ ಸಮಸ್ತ ಕುರುಬರ ಸಮುದಾಯಕ್ಕೆ ಅಭಿಮಾನ ತರುವ ಸಂಗತಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719

 
                         
                       
                       
                       
                       
                       
                       
                      