ಹೊನ್ನಾಳಿ! ದೇವರಮಗ ಕುಮಾರ್ ಹತ್ಯೆಗೈದ ದುಷ್ಕರ್ಮಿಗಳು!

ಹೊನ್ನಾಳಿ: ಪಟ್ಟಣದ ಕೆಂಚೆದೇವರು ಬೀರಲಿಂಗೇಶ್ವರ ದೇವಾಲಯದ ದೇವರ ಮಗ(ಗಣ ಮಗ)ನಾಗಿದ್ದ ಹೆಚ್.ಕೆ. ಕುಮಾರ್ (40) ಇವರನ್ನು ಪಟ್ಟಣದ ಹೊರವಲಯದಲ್ಲಿರುವ ಹೆಚ್. ಕಡದಕಟ್ಟೆ ಸಮೀಪ ನಿನ್ನೆ ಅಪರಿಚಿತ ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದಿದ್ದಾರೆ.
ಹೊನ್ನಾಳಿಯಲ್ಲಿ ಚಿರಪರಿಚಿತರಾಗಿದ್ದ ಹೆಚ್.ಕೆ. ಕುಮಾರ್ ಯಾರೊಂದಿಗೂ ವೈರತ್ವ ಕಟ್ಟಿಕೊಂಡವರಲ್ಲ. ಇಂತಹ ವ್ಯಕ್ತಿಯನ್ನು ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದು, ಶವವನ್ನು ಉನ್ನತ ಮಟ್ಟದ ತನಿಖೆಗಾಗಿ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಒಯ್ಯಲಾಗಿದ್ದು ಪೋಸ್ಟ್ ಮಾರ್ಟಮ್ ನಂತರ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದೆ0ದು ಹೊನ್ನಾಳಿ ಸಿಪಿಐ ದೇವರಾಜ್ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್.ಪಿ ಹಾಗೂ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಆದಷ್ಟು ಬೇಗ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗುವುದೆಂದು ಪೊಲೀಸ್ ಅಧಿಕಾರಿ ದೇವರಾಜು ತಿಳಿಸಿದ್ದಾರೆ.
garudavoice21@gmail.com 9740365719

 
                         
                       
                       
                       
                       
                       
                       
                      