5 ತಲೆಮಾರು ಕಂಡ ಶತಾಯುಷಿ ತೋಳಹುಣಸೆ ಹುನುಕಿಬಾಯಿ!

ದಾವಣಗೆರೆ : ಮನುಷ್ಯನ ಜೀವಿತಾವಧಿ 50 ವರ್ಷಕ್ಕಿರುವ ಈ ಪರಿಸ್ಥಿತಿಯಲ್ಲಿ ತೋಳಹುಣಸೆ ಗ್ರಾಮದ ಹುನುಕಿಬಾಯಿ ಬರೋಬ್ಬರಿ 5 ತಲೆಮಾರುಗಳನ್ನು ನೋಡಿದ್ದು ನೋಡುಗರ ಹುಬ್ಬೆರುವಂತೆ ಮಾಡಿದೆ. ತೋಳಹುಣಸೆ ಗ್ರಾಮದ ಹುನುಕಿಬಾಯಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳುಗಳ ಸಂತತಿ ನೋಡಿ ಕಣ್ತುಂಬಿಕೊoಡಿದ್ದಾರೆ.
ಹುನುಕಿಬಾಯಿ ಅವರಿಗೆ 4 ಜನ ಹೆಣ್ಣು ಮಕ್ಕಳು ಹಾಗೂ 2 ಗಂಡು ಮಕ್ಕಳು 18 ಜನ ಮೊಮ್ಮಕ್ಕಳು, 15 ಜನ ಮರಿ ಮಕ್ಕಳು ಇದ್ದು ಈಗಾಗಲೇ 5 ತಲೆಮಾರುಗಳನ್ನು ನೋಡಿದ್ದಾರೆ. ಹುನುಕಿಬಾಯಿ ಜನವರಿ 1, 1910ರಲ್ಲಿ ಜನಿಸಿದ್ದು ಇದೀಗ 112 ವರ್ಷದ ಗಡಿ ದಾಟಿದ್ದಾರೆ.