ಸಂಬ0ಧಿ ಶವಸಂಸ್ಕಾರಕ್ಕೆ ಹೋದವ ಶವವಾದ! ಸಾವಿಗೆ ಕಾರಣ ರಸ್ತೆ ಗುಂಡಿಯೋ? ಮಳೆಯೋ? ವೇಗದ ಚಾಲನೆಯೋ?

ದಾವಣಗೆರೆ: ಅವಸರವಾಗಿ ಮನೆಗೆ ತೆರಳುತ್ತಿದ್ದ ವಾಹನ ಸವಾರನೊಬ್ಬ ರಸ್ತೆಯಲ್ಲಿದ್ದ ತಗ್ಗು ಗುಂಡಿಯೊ0ದು ಬೀಳುತ್ತಿದ್ದ ಮಳೆಯಲ್ಲಿ ಗಮನಿಸದೆ ಸಾವನ್ನಪ್ಪಿರುವ ಘಟನೆ ಜಗಳೂರಿನ ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಚಿತ್ರದುರ್ಗ ತಾಲೂಕಿನ ಕಾಲಗೆರೆ ಗ್ರಾಮದ ಮಂಜಮ್ಮ ಗಂಡ ತಿಮ್ಮಣ್ಣ ಎಂಬುವರು ಬಿಳಿಚೋಡು ಗ್ರಾಮದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೇ.21ರಂದು ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಪಿರ್ಯಾದಿದಾರರ ಸಂಬ0ದಿಯಾದ ಪ್ರಸನ್ನ ಎಂಬುವರು ಮೃತಪಟ್ಟಿದ್ದರಿಂದ ಮೃತನ ಶವಸಂಸ್ಕಾರಕ್ಕೆ ಪಿರ್ಯಾದಿ ಮಂಜಮ್ಮ ಮತ್ತು ಪಿರ್ಯಾದಿಯ ಮಗ ದೇವರಾಜ್ ಅವರು ತಮ್ಮ ಕೆಎ-16/ಇಸಿ-7226 ಸಂಖ್ಯೆಯ ಮೋಟಾರ್ ಬೈಕಿನಲ್ಲಿ ಪಲ್ಲಾಗಟ್ಟೆ ಗ್ರಾಮಕ್ಕೆ ಹೋಗಿದ್ದಾರೆ. ಇವರ ಜೊತೆಗೆ ಪಿರ್ಯಾದಿದಾರರ ಗ್ರಾಮದ ಗೋವಿಂದಪ್ಪ ಮತ್ತು ಆತನ ಹೆಂಡತಿ ರೇಖಾ ಇವರು ಸಹ ಅವರ ಮೋಟಾರ್ ಬೈಕಿನಲ್ಲಿ ಮಧ್ಯಾಹ್ನ ತಮ್ಮ ಗ್ರಾಮದಿಂದ ಪಲ್ಲಾಗಟ್ಟೆ ಗ್ರಾಮಕ್ಕೆ ಹೋಗಿದ್ದಾರೆ.
ಪಲ್ಲಾಗಟ್ಟೆ ಗ್ರಾಮದಲ್ಲಿ ಪಿರ್ಯಾದಿದಾರರ ಸಂಬ0ದಿಯ ಶವಸಂಸ್ಕಾರ ಮುಗಿಸಿಕೊಂಡು ವಾಪಸ್ ಬಿಳಿಚೋಡು ಮುಖಾಂತರ ತಮ್ಮ ಗ್ರಾಮವಾದ ಕಾಲಗೆರೆಗೆ ಹೋಗುವ ವೇಳೆ ರಾತ್ರಿ 8-30ರ ಸುಮಾರಿಗೆ ಬಿಳಿಚೋಡು ಬಳಿಯ ಆಸಗೋಡು ರಸ್ತೆಯಲ್ಲಿರುವ ಕೆಇಬಿ ಸ್ಟೇಷನ್ನಿನ ಸ್ವಲ್ಪ ದೂರದಲ್ಲಿ ಆಸಗೋಡು ಕಡೆಯಿಂದ ಬಿಳಿಚೋಡು ಕಡೆಗೆ ಮೃತ ದೇವರಾಜ್ ಮೊಟಾರ್ ಬೈಕನ್ನು ಅತೀ ಜೋರಾಗಿ ಓಡಿಸಿಕೊಂಡು ಬರುವಾಗ ಮಳೆ ಬಂದು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ದೇವರಾಜ್ ಗಮನಿಸದೇ ಒಮ್ಮೆಲೆ ಮೋಟಾರ್ ಬೈಕನ್ನು ಗುಂಡಿಯಲ್ಲಿ ಇಳಿಸಿದಾಗ ಮೋಟಾರ್ ಬೈಕ್ ನಿಯಂತ್ರಣ ತಪ್ಪಿ ಪಿರ್ಯಾದಿ ಮತ್ತು ದೇವರಾಜ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಪಿರ್ಯಾದಿದಾರರಾದ ಮಂಜಮ್ಮ ಅವರ ತಲೆಯ ಹತ್ತಿರ ಪೆಟ್ಟು ಬಿದ್ದು ಗಾಯಗಳಾಗಿದ್ದು, ದೇವರಾಜ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದೂರು ದಾಖಲಿಸಲಾಗಿದೆ. ಗಾಯಗೊಂಡ ಪಿರ್ಯಾದಿದಾರರಾದ ಮಂಜಮ್ಮ 108 ಆಂಬ್ಯುಲೆನ್ಸ್ ನಲ್ಲಿ ಬಿಳಿಚೋಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪಿರ್ಯಾದಿ ಮತ್ತು ಮೃತ ದೇವರಾಜ್ ತಮ್ಮ ಕೆಎ-16/ಇಸಿ-7226 ನೇ ಮೋಟಾರ್ ಬೈಕಿನಲ್ಲಿ ತನ್ನ ಸಂಬ0ದಿಯ ಶವಸಂಸ್ಕಾರಕ್ಕೆ ತಮ್ಮ ಗ್ರಾಮದಿಂದ ಪಲ್ಲಾಗಟ್ಟೆ ಗ್ರಾಮಕ್ಕೆ ಹೋಗಿ ವಾಪಸ್ ಮೋಟಾರ್ ಬೈಕಿನಲ್ಲಿ ಬರುತ್ತಿರುವಾಗ ದೇವರಾಜ್ ಮೋಟಾರ್ ಬೈಕನ್ನು ಜೋರಾಗಿ ನಡೆಸಿಕೊಂಡು ಬಂದು ರಸ್ತೆಯಲ್ಲಿದ್ದ ಗುಂಡಿಯನ್ನು ಗಮನಿಸದೇ ಒಮ್ಮಲೇ ಇಳಿಸಿದ್ದರಿಂದ ಈ ಅಪಘಾತ ನಡೆದಿದೆ ಎಂದು ದೂರು ದಾಖಲಿಸಿಕೊಂಡಿರುವ ಬಿಳಿಚೋಡು ಪೊಲೀಸರು ಠಾಣಾ ಗುನ್ನೆ ನಂ:59/2022, ಕಲಂ:279, 337, 304(ಎ) ಐಪಿಸಿ ರೀತ್ಯಾ ಪ್ರಕರಣವನ್ನು ನೊಂದಾಯಿಸಿಕೊ0ಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗರುಡವಾಯ್ಸ್ ವಿಮರ್ಶೆ!
ಸಾವಿಗೆ ಕಾರಣ ರಸ್ತೆ ಗುಂಡಿಯೋ? ಮಳೆಯೋ?
ಚಿತ್ರದುರ್ಗ ತಾಲೂಕಿನ ಕಾಲಗೆರೆ ಗ್ರಾಮದ ಮಂಜಮ್ಮ ಮತ್ತು ಆತನ ಮಗ ದೇವರಾಜ್ ಎಂಬುವವರು ಮೇ.21ರಂದು ತಮ್ಮ ಗ್ರಾಮದಿಂದ ಸಂಬ0ಧಿಯ ಶವಸಂಸ್ಕಾರಕ್ಕಾಗಿ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮಕ್ಕೆ ತೆರಳುತ್ತಾರೆ. ಶವಸಂಸ್ಕಾರ ಕಾರ್ಯ ಮುಗಿಸಿಕೊಂಡು ರಾತ್ರಿ 8.30ರ ಸಮಯಕ್ಕೆ ಬಿಳಿಚೋಡು ಬಳಿಯ ಆಸಗೋಡು ರಸ್ತೆಯಲ್ಲಿರುವ ಕೆಇಬಿ ಸ್ಟೇಷನ್ನಿನ ಸ್ವಲ್ಪ ದೂರದಲ್ಲಿ ಆಸಗೋಡು ಕಡೆಯಿಂದ ಬಿಳಿಚೋಡು ಕಡೆಗೆ ದೇವರಾಜ್ ಮೋಟಾರ್ ಬೈಕನ್ನು ಅತೀ ಜೋರಾಗಿ ಓಡಿಸಿಕೊಂಡು ಬರುವಾಗ ಮಳೆ ಬಂದು ರಸ್ತೆಯಲ್ಲಿ ಇದ್ದ ಗುಂಡಿಯನ್ನು ಗಮನಿಸದೇ ಒಮ್ಮೆಲೆ ಮೋಟಾರ್ ಬೈಕನ್ನು ಗುಂಡಿಯಲ್ಲಿ ಇಳಿಸಿದಾಗ ಮೋಟಾರ್ ಬೈಕ್ ನಿಯಂತ್ರಣ ತಪ್ಪಿ ದೇವರಾಜ್ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ.
ಇಲ್ಲಿ ಮುಖ್ಯವಾದ ಪ್ರಶ್ನೆ, ದೇವರಾಜ್ ಸಾವಿಗೆ ಕಾರಣ ವೇಗವಾಗಿ ವಾಹನ ಚಾಲನೆ ಮಾಡಿದ್ದೋ? ಮಳೆ ಕಾರಣದಿಂದ ದಾರಿ ಕಾಣದೇ ಇದ್ದದ್ದೋ? ಅಥವಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯೋ? ಇನ್ನೂ ಕೆಲವರು ಗ್ರಹಚಾರ ಇರಬಹುದೋ ಎಂದು ಕೂಡ ಊಹಿಸುತ್ತಾರೆ. ಇಲ್ಲಿ ಎಲ್ಲದಕ್ಕೂ ಒಂದಕ್ಕೊ0ದು ಸಂಬ0ಧವಿರಬಹುದು. ಮಳೆ ಪ್ರಾಕೃತಿಕವಾಗಿ ಅದರ ಕಾರ್ಯ ನಡೆಸಿದೆ. ದೇವರಾಜ್ ನಿಧಾನವಾಗಿ ಬರಬೇಕಾಗಿತ್ತು ನಿಜ ಆದರೆ ರಸ್ತೆಯಲ್ಲಿ ಇದ್ದ ಒಂದು ಚಿಕ್ಕ ಗುಂಡಿ ಕಾಣದೆ ಬಿದ್ದಿದ್ದೆ ಮುಖ್ಯ ಕಾರಣವಾಯಿತಲ್ಲ. ಈ ಗುಂಡಿ ಇರದೆ ಇದ್ದಿದ್ದರೆ ದೇವರಾಜ್ ಸರಾಗವಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಈ ವ್ಯವಸ್ಥೆಗೆ ಅಥವಾ ಗುಂಡಿ ಬಿದ್ದ ರಸ್ತೆಗೆ ಕೊನೆ ಪಕ್ಷ ತ್ಯಾಪೆ ಹಾಕದೆ ಇರುವ ಸಂಬ0ಧಪಟ್ಟ ಸರ್ಕಾರವೆ ಕಾರಣ ಇರಬಹುದೆ ಎಂಬ ಅನುಮಾನಗಳು ದಟ್ಟವಾಗಿದೆ.
ಒಂದು ಚಿಕ್ಕ ಕಲ್ಲಿನಿಂದ ದ್ವಿಚಕ್ರ ವಾಹನ ಸ್ಕೀಡ್ ಆಗಿ ಬಿದ್ದು ಸಾವನ್ನಪ್ಪುವ ಅದೆಷ್ಟೋ ಸನ್ನಿವೇಶಗಳಿರುವಾಗ ಗುಂಡಿಯನ್ನು ಮುಚ್ಚದೆ ಇರುವುದು ಬೇಸರದ ಸಂಗತಿ. ಹಾಗಾಗಿ ಒಂದು ಚಿಕ್ಕ ಗುಂಡಿಯಿ0ದ ಏನಾದೀತು ಎಂದು ಯೋಚಿಸದೆ ಸರ್ಕಾರ ಹಾಗೂ ಸಂಬ0ಧಪಟ್ಟ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಇಂತಹ ಚಿಕ್ಕ ಚಿಕ್ಕ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ವಾಹನ ಸವಾರರ ಪ್ರಾಣ ರಕ್ಷಿಸಬೇಕಿದೆ.
garudavoice21@gmail.com 9740365719

 
                         
                       
                       
                       
                       
                      