ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಮೇ.25 ರಂದು ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮೇ.26 ರಂದು ಬೆ.10.30 ರಿಂದ ಮ.01 ರವರೆಗೆ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ ಮ.01.30 ಕ್ಕೆ ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸುವರು. ಪುನಃ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಮೇ.27 ರಂದು ಬೆ.10.30 ರಿಂದ ಮ.01 ಗಂಟೆಯವರೆಗೆ ಹಿರೇಗೋಣಿಗೆರೆ ಹಾಗೂ ಬೆಳಗುತ್ತಿ ಗ್ರಾಮಗಳಲ್ಲಿ ನಡೆಯುವ ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಹಾಗೂ ಹೊನ್ನಾಳಿಯಲ್ಲಿ ವಾಸ್ತವ್ಯ ಮಾಡುವರು. ಮೇ.28 ರಂದು ಬೆ.11.30ಕ್ಕೆ ಗೋವಿನಕೋವಿ ಗ್ರಾಮದಲ್ಲಿ ಪಶು ಆಸ್ಪತ್ರೆ ಕಟ್ಟಡ ಮತ್ತು ಲಿಡ್ಕರ್ ಶೆಡ್ ಉದ್ಘಾಟನೆ ನೆರವೇರಿಸುವರು, ಮ.12 ರಿಂದ 03.30 ರವರೆಗೆ ಮಲ್ಲಿಗೇನಹಳ್ಳಿ, ಆರುಂಡಿ, ಕುದುರೆಕೊಂಡ, ಫಲವನಹಳ್ಳಿ, ಸವಳಂಗ, ಹಳೆಜೋಗ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಉದ್ಘಾಟನೆ ನೆರವೇರಿಸುವರು, ನಂತರ ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ ಮಾಡುವರು.
ಮೇ.29 ರಂದು ಬೆ.10.30 ಕ್ಕೆ ಮರಿಗೊಂಡನಹಳ್ಳಿ-ಕೋಟೆಹಾಳ್ ಗ್ರಾಮದ ಸರ್ಕಾರಿ ಫ್ರೌಡಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಬೆ.11.15 ರಿಂದ ಕುರುವ ಹಳೇದಿಬ್ಬ, ಮರಿಗೊಂಡನಹಳ್ಳಿ, ತೆಗ್ಗಿಹಳ್ಳಿ, ಹಳೆಮಳಲಿ, ಹೊಸಮಳಲಿ, ದೊಡ್ಡೇರಿ ಗ್ರಾಮಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ನಂತರ ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ ಮಾಡುವರು ಎಂದು ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719