ಬೊಮ್ಮಾಯಿಗಿಂತಲೂ ಮುತಾಲಿಕ್ ಹಾಗೂ ಚಕ್ರತೀರ್ಥ ಹೆಚ್ಚು ಸುದ್ದಿಯಲ್ಲಿದ್ದಾರೆ – ಡಿ.ಬಸವರಾಜ್

ದಾವಣಗೆರೆ: ರಾಜ್ಯದಲ್ಲಿ ಇಂದು ಮುಖ್ಯ ಮಂತ್ರಿ ಬೊಮ್ಮಾಯಿಗಿಂತಲೂ ಹೆಚ್ಚಾಗಿ ಮುತಾಲಿಕ್ ಹಾಗೂ ಚಕ್ರತೀರ್ಥ ಸುದ್ದಿಯಲ್ಲಿದ್ದಾರೆ ಯಾಕಂದ್ರೆ ಇಂದು ಸರ್ಕಾರವನ್ನು ಮುಖ್ಯಮಂತ್ರಿಯಾಗಲಿ ಸಚಿವರುಗಳಾಗಲಿ ನಡೆಸುತ್ತಿಲ್ಲ ಎಲ್ಲಾ ಬದಲಾಗಿ ಸಂಘ ಪರಿವಾರ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ನಗರದ ಜಯದೇವ ವೃತ್ತದಲ್ಲಿ ನೆನ್ನೆ ನಡೆದ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟೀಕಾಯತ್ ಅವರಿಗೆ ಮಸಿ ಬಳಿದು ಕೆಲವು ಸಂಘಟನೆಯಯವರು ಅವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಖ್ಯಮಂತ್ರಿಗಳು ಸಂಘಪರಿವಾರದ ಅಣತಿಯಂತೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಗೃಹ ಮಂತ್ರಿಗಳು ಮೌನವಾಗಿ ಇದೆಲ್ಲದಕ್ಕೂ ಸಮ್ಮತಿಸುವಂತೆ ವರ್ತಿಸುತ್ತಿರುವುದು ಈ ನಾಡಿನ ದುರಂತವೇ ಸರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವಿಪಕ್ಷ ನಾಯಕ ಗಡಿಗುಡಾಲ್ ಮಂಜುನಾಥ್ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ದುರಾಡಳಿತಕ್ಕೆ ರಾಜ್ಯದಲ್ಲಿ ಹಿಂದೆಂದೂ ಕಾಣದಂಥ ಘಟನೆಗಳು ಇಂದು ನಡೆಯುತ್ತಿರುವುದೇ ಸಾಕ್ಷಿ ಎಂದು ಆರೋಪಿಸಿದರು.
ದಾವಣಗೆರೆ ಉತ್ತರ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ಈ ಕೋಮುವಾದಿ ಸರ್ಕಾರಗಳಿಂದ ರಾಜ್ಯದ ಜನರು ಬೇಸತ್ತಿದ್ದು ಇದಕ್ಕೆಲ್ಲ ಅಂತ್ಯ ಕಾಲ ಸಮೀಪಿಸುತ್ತಿದೆ ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ಇವರಿಗೆಲ್ಲ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಕಿಸಾನ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಜಿಕ್ರಿಯಾ ಮಾತನಾಡಿ ಈ ರೈತ ವಿರೋಧಿ ಜನ ವಿರೋಧಿ ಸರ್ಕಾರಗಳಿಂದ ಮುಂದೆ ಇನ್ನೂ ಹೆಚ್ಚಿನ ಅಪಾಯ ರಾಜ್ಯದ ಜನರಿಗೆ ಕಾದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಯುವ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ನವೀನ್ ನಲವಾಡಿ ಮಾತನಾಡಿ ರೈತ ದೇಶದ ಬೆನ್ನೆಲುಬು ಅಂತಾರೆ ಆದರೆ ಈ ಲಜ್ಜೆಗೆಟ್ಟ ಸರ್ಕಾರ ರೈತರಿಗೆ ಯಾವುದೇ ರೀತಿಯ ಭದ್ರತೆ ರಕ್ಷಣೆ ಒದಗಿಸುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಮಹಬೂಬ್ ಬಾಷಾ,ಲಿಯಾಖತ್ ಅಲಿ,ರೋಷನ್,ಮಂಜುನಾಥ್ ಸ್ವಾಮಿ ಕತ್ತಲಗೆರೆ,ಇಮಾಮ್ ಹುಸೇನ್,ಮನು,ಅವಿನಾಶ್,ಕೃಷ್ಣ,ಚಿರಂಜೀವಿ,ಸುಹೈಲ್,ಮಲ್ಲಿಕಾರ್ಜುನ್, ಅಜ್ಮಲ್,ಆಯಾಜ್ ಇನ್ನೂ ಅನೇಕ ಮುಖಂಡರುಗಳು ಭಾಗವಹಿಸಿದ್ದರು

 
                         
                       
                       
                       
                       
                       
                       
                      