ಶಿವಮೊಗ್ಗದ ಮನೆಯೊಂದರ ಫ್ರಿಡ್ಜ್ ಒಳಗೆ ಹಾವು!

ದಾವಣಗೆರೆ: ಆಹಾರ ಸಾಮಾಗ್ರಿಗಳನ್ನಿಡಲು ಬಳಸುವ ಪ್ರಿಡ್ಜ್ ನಲ್ಲಿ ಹಾವಿರುವುದನ್ನು ನೋಡಿ ಜನ ಬೆಚ್ಚಿಬಿದ್ದಿರುವ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಹೌದು, ಹಾವು ತಮಗೆ ಸುರಕ್ಷಿತ ಎನಿಸುವ ಯಾವ ಸ್ಥಳದಲ್ಲಾದರೂ ಇರಬಹುದು. ಹಾಗೆಯೇ ಶಿವಮೊಗ್ಗದ ಮನೆಯೊಂದರಲ್ಲಿ ಫ್ರಿಡ್ಜ್ ನಲ್ಲಿ ಹಾವು ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಫ್ರಿಡ್ಜ್ ಓಪನ್ ಮಾಡುವಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತು ಸಂಭವಿಸುವ ಸಾಧ್ಯತೆ ಎದುರಾದರೂ ಅಚ್ಚರಿ ಪಡುವಂತಿಲ್ಲ. ಫ್ರಿಡ್ಜ್ನೊಳಗೆ ಹಾವೊಂದು ಇತ್ತು ಎಂದರೆ ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾದೀತು. ಶಿವಮೊಗ್ಗದ ನಿವಾಸಿಯೊಬ್ಬರ ಮನೆಯ ಫ್ರೀಡ್ಜ್ನಲ್ಲಿ ಹಾವು ಇದ್ದದ್ದು ಬೆಳಕಿಗೆ ಬಂದಿದೆ.
ಶಿವಮೊಗ್ಗದ ಸಹ್ಯಾದ್ರಿ ನಗರದ ಶಂಕರ್ ಅಜ್ಜಂಪುರ ಎಂಬುವವರ ಮನೆಯ ಫ್ರಿಡ್ಜ್ನಲ್ಲಿ ಹಾವು ಕಂಡು ಬಂದಿದೆ. ಫ್ರೀಡ್ಜ್ನಲ್ಲಿ ಇಟ್ಟಿದ್ದ ತರಕಾರಿಗಳ ಮಧ್ಯೆ ಹಾವು ಆಶ್ರಯ ಪಡೆದಿತ್ತು. ಫ್ರಿಡ್ಜ್ನ ಕೆಳ ಭಾಗದ ಟ್ರೇನಲ್ಲಿ ಮನೆಯವರು ಹಾವು ಇರುವುದನ್ನು ಕಂಡು ಗಾಬರಿಗೊಂಡಿದ್ದರು. ತಕ್ಷಣ ಸ್ನೇಕ್ ಕಿರಣ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಫ್ರಿಡ್ಜ್ನಲ್ಲಿದ್ದ ಹಾವನ್ನು ರಕ್ಷಣೆ ಮಾಡಿದ್ದಾರೆ. ಈ ಹಾವು ಮೂರು ಅಡಿ ಉದ್ದ ಇದ್ದು, ಆಭರಣ ಹಾವು, ಇದು ಜೀವಕ್ಕೆ ಅಪಾಯ ತರುವ ಹಾವಲ್ಲ ಎಂದು ಸ್ನೇಕ್ ಕಿರಣ್ ತಿಳಿಸಿದ ನಂತರ ಮನೆಯವರು ನಿಟ್ಟುಸಿರುಬಿಟ್ಟಿದ್ದಾರೆ.
garudavoice21@gmail.com 9740365719