ದಾವಣಗೆರೆ ನರಗನಹಳ್ಳಿ ಗ್ರಾಪಂನಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆ
ದಾವಣಗೆರೆ : ತಾಲೂಕಿನ ನರಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ0ದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವುದರ ಮೂಲಕ ಪ್ರಾಕೃತಿಕವಾಗಿ ಆಚರಿಸಿದರು.ಹೊನ್ನನಾಯಕನಹಳ್ಳಿ ಮತ್ತು ನರಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟಿಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 200ರಷ್ಟು ವಿವಿಧ ಗಿಡಗಳನ್ನು ನೆಡಲಾಗಿದ್ದು, ತಾಲ್ಲೂಕು ಪಂಚಾಯಿತಿ ಇಓ ಆನಂದ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೃತಿಮಲ್ಲೇಶ್, ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ವಿದ್ಯಾವತಿ, ತಾಲ್ಲೂಕು ಸಂಯೋಜಕ ಗಿರೀಶ್, ತಾಲ್ಲೂಕು ತಾಂತ್ರಿಕ ಸಂಯೋಜಕ ಬಸವರಾಜಯ್ಯ, ತಾಂತ್ರಿಕ ಸಹಾಯಕ ರೇವಣಗೌಡ ಬಿ. ಪಿಡಿಓ ಕೃಷ್ಣಮೂರ್ತಿ ಡಿ.ಟಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ರೂಪಮ್ಮ, ಡಿಇಓ ನವೀನ ಕುಮಾರ್ ಎನ್ ಆರ್, ಕರವಸೂಲಿಗಾರ ಮಲ್ಲಿಕಾರ್ಜುನ ಬಿಕೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 60 ಜನ ಕೂಲಿ ಕಾರ್ಮಿಕರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
garudavoice21@gmail.com 9740365719