ಅಲೈಯನ್ಸ್ ವಿಶ್ವವಿದ್ಯಾಲಯ ಹಾಗೂ ವಿಪ್ರೋ 3Dಯಿಂದ, MBA ಪದವಿಯಲ್ಲಿ “ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಡಿಜಿಟಲ್ ಲೀಡರ್‌ಶಿಪ್” ಕಾರ್ಯಕ್ರಮದ ಒಪ್ಪಂದಕ್ಕೆ ಸಹಿ

ಬೆಂಗಳೂರು: ಅಲೈಯನ್ಸ್ ವಿಶ್ವವಿದ್ಯಾಲಯವೂ ವಿಪ್ರೋ 3ಡಿ ಜತೆ ಮೆಮೊರಂಡಮ್ ಆಫ್ ಅಂಡಸ್ಟಾ0ಡಿ0ಗ್ (MoU)  ಒಡಂಬಡಿಕೆ ಮಾಡಿಕೊಳ್ಳುವ ಮೂಲಕ MBA ಪದವಿ ಸ್ತರದಲ್ಲಿ ಹಲವು ವಿನೂತನ ವಿಷಯಗಳನ್ನು ಅಳವಡಿಸಲು ಹೊರಟಿದೆ. ಮೆಟಲ್ ಅಡಕ್ಟೀವ್ ಮ್ಯಾನುಫ್ಯಾಕ್ಟರಿಂಗ್,(AM) ಬಿಜಿನಸ್ ಆಫ್ ವಿಪ್ರೋ ಇನ್ಸಟ್ರಕ್ಷನ್ ಇಂಜಿನೀಯರಿ0ಗ್ (WIN) ವಿಷಯಗಳ ಮೇಲೆ ಸಹಿ ಹಾಕುವ ಮೂಲಕ MBA ಪದವಿಯಲ್ಲಿ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಡಿಜಿಟಲ್ ಲೀಡರ್ ಶಿಪ್ ಕಾರ್ಯಕ್ರಮಕ್ಕೆ ಇಂಬು ನೀಡಿದೆ.

ವಿಶ್ವದಲ್ಲಿ ಪ್ರಸ್ತುತವಾಗಿ ಬಹುತೇಕ ಉದ್ಯಮಗಳು ಡಿಜಿಟಲ್ ತಾಂತ್ರಿಕತೆಯ ಮೇಲೆ ರೂಪುಗೊಳ್ಳುತ್ತಿದ್ದು, ಸ್ಮಾರ್ಟ್ ಮ್ಯಾನುಫ್ಯಾಕ್ಚರ್ ಕ್ಷೇತ್ರದಲ್ಲಿ ಉದ್ಯೋಗಿಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.. ತತ್ ಕ್ಷಣದ ಅನಿವಾರ್ಯತೆ ನೀಗಿಸುವ ನಿಟ್ಟಿನಲ್ಲಿ ಅದರ ಅವಶ್ಯಕತೆಯೂ ಇದೆ. ಅದ್ರಲ್ಲೂ ಏರೋನಾಟಿಕಲ್, ಆಟೋಮೊಟೀವ್ ಎಲೆಕ್ಟಾçನಿಕ್ಸ್, ಹೆಲ್ತ್ ಕೇರ್ ರಿನಿವಬಲ್ ಎನರ್ಜಿಯಂತಹ ಕ್ಷೇತ್ರದಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.

ನಿರ್ವಹಣೆ ಹಾಗೂ ಕಾರ್ಯಾಚರಣೆಯ ದಕ್ಷತೆ ಮತ್ತು ವಿಷಯದ ಮುನ್ಸೂಚನೆಯ ವಿಶ್ಲೇಷಣೆಯಲ್ಲಿ ಹೆಚ್ಚಿನ ಸ್ಪಷ್ಟತೆ ಹಾಗೂ ತೀವ್ರತೆಯ ವರ್ಧನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಧಾನಿಸಬೇಕಾದ ಸಂದರ್ಭ ಬಂದಾಗ, ಸ್ವಯಂಚಾಲಿತ ಪ್ರಕ್ರಿಯೆಗಳ ಮೂಲಕ ಮಾಹಿತಿ ಪಡೆಯುವಲ್ಲಿ ಡಿಜಿಟಲೀಕರಣದ ಅಗತ್ಯವನ್ನು ಈ ವಲಯಗಳು ಒತ್ತಿಹೇಳುತ್ತಿವೆ. ಅದರ ಫಲಿತಾಂಶವೂ ನಮ್ಮ ಮುಂದೆ ಇದೆ… ಹಾಗೆಯೇ ಡಿಜಿಟಲ್ ಉತ್ಪಾದನಾ ತಂತ್ರಜ್ಞಾನಗಳು, ವ್ಯವಹಾರ ನಿರ್ವಹಣೆ ಮತ್ತು ಅನುಷ್ಠಾನ ವಿಧಾನಗಳಲ್ಲಿ ಸಾಮರ್ಥ್ಯಗಳ ಸರಿಯಾದ ಮಿಶ್ರಣದ ಸೃಜನಾತ್ಮಕ ರೀತಿಯಲ್ಲಿ ಉಪಯೋಗವನ್ನು ಮಾಡಲು ಸಹಕಾರಿಯಾಗುತ್ತದೆ.. ವಿದ್ಯಾರ್ಥಿಗಳ ಮಧ್ಯೆ ವಿನೂತನ ತಂತ್ರಜ್ಞಾನದ ವಾತವರಣ ಸೃಷ್ಟಿಸುವ ಮೂಲಕ ಅಲೈಯನ್ಸ್ ವಿಶ್ವವಿದ್ಯಾಲಯ ಹಾಗೂ ವಿಪ್ರೋ 3dಯೂ ಸ್ಮಾರ್ಟ್ ಮ್ಯಾನುಫ್ಯಾಕ್ಷರಿಂಗ್ ಬಗ್ಗೆ ಸರಳವಾಗಿ ತಿಳಿಯುವಂಥ ವೇದಿಕೆ ಕಲ್ಪಿಸಲಿದೆ..

ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗಿಯಾದ ವಿವಿಧ ಬಗೆಯ ಪದವಿ ವಿದ್ಯಾರ್ಥಿಗಳಿಗೆ ಅಲೈಯನ್ಸ್ ವಿಶ್ವವಿದ್ಯಾಲಯ ವಿಶೇಷವಾದ ಸರ್ಟಿಫಿಕೇಟ್ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸುವಲ್ಲಿ ಸಹಕಾರಿಯಾಗಲಿದೆ. ಇಂತಹ ವಿಭಿನ್ನ ಹಾಗೂ ಮುಂದುವರೆದ ವಿಷಯಕ್ಕೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸಹಿ ಹಾಕಿದ್ದು, ಅಲೈಯನ್ಸ್ ವಿಶ್ವ ವಿದ್ಯಾಲಯದ ಕೀರ್ತಿಗೆ ಮತ್ತೊಂದು ಗರಿ ಬಂದ0ತಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು. ಇವರ ಸಮಕ್ಷಮ ದಲ್ಲಿ (MoU)  ಬಗ್ಗೆ ಹಸ್ತಾಕ್ಷರ ಮಾಡಲಾಯಿತು. ಪ್ರೋಗ್ರಾಮ್ ಡೈರೆಕ್ಟರ್ ಡಾ. ಯು ಚಂದ್ರಶೇಖರ್ (ಸಲಹೆಗಾರರು) ಅಡ್ವಾನ್ಸ್ ಟೆಕ್ನಾಲಜಿ ಸೆಂಟರ್, ಗೌರವಾನ್ವಿತ ಅಜಿಂಕ್ಯಾ ಭೋಸ್ಲೆ ಮ್ಯಾನೇಜರ್ ವಿಪ್ರೋ 3d ಬೆಂಗಳೂರು, ಡಾ. ಅನುಭಾಸಿಂಗ್ ವೈಸ್ ಚಾನ್ಸಲರ್, ಡಾ. ನಿವೇದಿತಾ ಮಿಶ್ರ ರಿಜಿಸ್ಟಾçರ್, ಡಾ. ರಂಜನ್, ಅಸೋಸಿಯೇಟ್ ಪ್ರೋ. ವೈಸ್ ಚಾನ್ಸಲರ್ (ಅಕಾಡೆಮಿಕ್ ಹಾಗೂ ರಿಸರ್ಚ್), ಡಾ. ಮೈಕಲ್ ಜೇಮ್ಸ್ ಬಾರ್ನೆಸ್ ಡೀನ್, ಸ್ಕೂಲ್ ಆಫ್ ಬಿಜಿನಸ್, ಡಾ. ರೋಜಲಿನ್ ಪ್ರಧಾನ್, ಪ್ರೋಗ್ರಾಮ್ ಡೈರೆಕ್ಟರ್-ಬಿಬಿಎ, ಡಾ. ಸುಕನ್ಯ ಕುಂದು ಎರಿಯಾ ಚೇರ್, ಆಪರೇಷನ್ ಮ್ಯಾನೆಜ್‌ಮೆಂಟ್, ಸ್ಕೂಲ್ ಆಫ್ ಬಿಜಿನಸ್ ಮ್ಯಾನೆಜ್‌ಮೆಂಟ್, ಡಾ. ಹರಿನಾಥ್ ಏರ್ ರೆಡ್ಡಿ, ಅಸೋಸಿಯೆಟ್ ಪ್ರೊಫೆಸರ್ ಕಾಲೇಜ್ ಅಫ್ ಇಂಜಿನಿಯರಿ0ಗ್ ಅಂಡ್ ಡಿಸೈನ್ ಆಫ್ ಅಲೈಯನ್ಸ್ ವಿಶ್ವವಿದ್ಯಾಲಯ ಮತ್ತಿತರರು ಇದ್ದರು.

 

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!