ದ್ವಿತೀಯ ಪಿಯುಸಿ ಫಲಿತಾಂಶ! ದಾವಣಗೆರೆ ಜಿಲ್ಲೆಯ ಟಾಪರ್ ವಿದ್ಯಾರ್ಥಿಗಳಿವರು
ದಾವಣಗೆರೆ : ದ್ವಿತೀಯ ಪಿಯುಸಿ ಫಲಿತಾಂಶ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಕಟಿಸಿದ್ದು, ದಾವಣಗೆರೆ ಜಿಲ್ಲೆಯ 14 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕದೊ0ದಿಗೆ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ನ್ಯಾಮತಿ ತಾಲೂಕು ವ್ಯಾಪ್ತಿಯ ಬೆಳಗುತ್ತಿಯಲ್ಲಿರುವ ಶ್ರೀ ತೀರ್ಥಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ ಡಿ.ಆರ್. ಪ್ರಥಮ, ಜಗಳೂರು ತಾಲೂಕಿನ ವಾಸುದೇವರೆಡ್ಡಿ ಪದವಿ ಪೂರ್ವ ಕಾಲೇಜು ಕಮಂಡಲಗೊ0ದಿಯ ಲಕ್ಷ್ಮಿ ಬಿ. ದ್ವಿತೀಯ, ಜಗಳೂರಿನ ನಾಲಂದ ಪದವಿ ಪೂರ್ವ ಕಾಲೇಜಿನ ಭವಾನಿ ಜಿ.ಟಿ ಮತ್ತು ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಪದವಿ ಪೂರ್ವ ಕಾಲೇಜಿನ ಸಫೂರಾ ಬಾನು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದಾವಣಗೆರೆಯ ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನ ಜೀಯಾ ಎಂ.ಜೈನ್ ಪ್ರಥಮ, ತೋಳಹುಣಸೆಯಲ್ಲಿರುವ ಬಾಪೂಜಿ ಎಸ್.ಪಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಚೈತ್ರ, ಆರ್.ಜಿ. ಪದವಿ ಪೂರ್ವ ಕಾಲೇಜಿನ ದಿಶಾ ಜೈನ್ ದ್ವಿತೀಯ, ದಾವಣಗೆರೆ ನಗರದ ಸರ್.ಎಂ.ವಿ. ಪದವಿ ಪೂರ್ವ ಕಾಲೇಜಿನ ಸೃಷ್ಟಿ ಎಂ.ಎಸ್. ಮತ್ತು ಕಾರ್ತಿಕ ಜಿ., ತೃತೀಯ ಸ್ಥಾನದಲ್ಲಿದ್ದಾರೆ.
ಇನ್ನೂ ವಿಜ್ಞಾನ ವಿಭಾಗದಲ್ಲಿ ಶಿರಮಗೊಂಡನಹಳ್ಳಿಯ ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ಕಾವ್ಯ ಎಂ.ಜಿ. ಪ್ರಥಮ, ಮುರಿಕಿ ಶ್ರೀ ಬಾರುಣಿ, ಭುವನ ಎ., ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿನಾಯಕ ಎಲ್., ದ್ವಿತೀಯ ಸ್ಥಾನ ಮತ್ತು ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ರಕ್ಷಿತ ಜಿ.ಡಿ., ತೃತೀಯ ಸ್ಥಾನ ಪಡೆದಿದ್ದಾರೆ.
garudavoice21@gmail.com 9740365719