ನನ್ನ ಅಮ್ಮ ನಂಬರ್-1 ರಿಯಾಲಿಟಿ ಶೋ ಉದ್ಘಾಟನೆ

ದಾವಣಗೆರೆ: ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ನಗರದ ಕಲಾ ಕಲ್ಪ ಆರ್ಟ್ ಅಕಾಡೆಮಿ ಹಾಗೂ ವಿ ಯೂನಿಯನ್ ಇವೆಂಟ್ ಇವರು ಆಯೋಜಿಸಿದ್ದ “ನನ್ನ ಅಮ್ಮ ನಂಬರ್ 1” ರಿಯಾಲಿಟಿ ಶೋ ಉದ್ಘಾಟನೆ ಕಾರ್ಯಕ್ರಮವನ್ನು ನಗರದ ಪ್ರತಿಷ್ಟಿತ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು ಮಾಜಿ ನಗರಸಭೆ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ ಮತ್ತು ಲತಿಕಾ ದಿನೇಶ್ ಕೆ ಶೆಟ್ಟಿಯವರು ಉದ್ಘಾಟಿಸಿದರು
ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಲತೀಕಾ ಶೆಟ್ಟಿಯವರು ಮಾತನಾಡಿ ಇದೊಂದು ಹೃದಯಕ್ಕೆ ಹತ್ತಿರವಾಗುವ ಟೈಟಲ್ ನಮ್ಮ ಮಕ್ಕಳಿಗೆ ನಾವು ನಂಬರ್ ಒನ್ ಹಾಗೂ ರೋಲ್ ಮಾಡೆಲ್ ಆಗಬೇಕು ಎಂದರು ಇದೊಂದು ಒಳ್ಳೆಯ ಕಾಪ್ಟರ್ ಇಂತಹ ನೂರಾರು ಕಾರ್ಯಕ್ರಮಗಳು ನಡೆದರೆ ಮಹಿಳೆಯರಿಗೆ ತುಂಬಾ ಉತ್ತೇಜನಕಾರಿಯಾಗಿರುತ್ತದೆ ಎಂದು ತಿಳಿಸಿದರು
ದಿನೇಶ್ ಕೆ ಶೆಟ್ಟಿ ಅವರು ಮಾತನಾಡಿ ಇಂತಹ ರಿಯಾಲಿಟಿ ಶೋಗಳು ಹೆಚ್ಚಾದರೆ ಗ್ರಾಮೀಣ ಪ್ರದೇಶದ ಮಕ್ಕಳು ಅವಕಾಶ ಸಿಗುವಂತಾಗಲು ಹೊಸ ಪ್ರತಿಭೆಗಳು ಹೊರ ಹೊಮ್ಮಲಿದೆ ಎಂದು ಈ ಕಾರ್ಯಕ್ರಮ ಆಯೋಜಿಸಿದ ಆಯೋಜಕರಿಗೆ ಅಭಿನಂದನೆ ತಿಳಿಸಿದರು
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಯೋಜಕರಾದ ಹೇಮಾ ಶ್ರೀನಿವಾಸ್ ರೇಖಾ ನಾಗರಾಜ್ ಶಾರದಾ ಮಾಗನಳ್ಳಿ ಭಾರತಿ ಪ್ರಸನ್ನ ಇನ್ನು ಮುಂತಾದವರಿದ್ದರು