ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಕೊವಿಡ್ ಸೊಂಕು.! 100 ರ ಗಡಿ ದಾಟಿದ ಕರೋನಾ ಆಕ್ಟೀವ್ ಕೇಸ್.!

ದಾವಣಗೆರೆ: ಜಿಲ್ಲೆಯಲ್ಲಿ ಇಂದು 32 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. Corona virus disease covid-19
ಇಂದು ಜಿಲ್ಲೆಯಲ್ಲಿ 305 ಜನರಿಗೆ ಆರ್ ಟಿ ಪಿ ಸಿ ಆರ್ ಹಾಗೂ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು 9 ಜನ ದಾವಣಗೆರೆ ತಾಲ್ಲೂಕಿನವರಿಗೆ ಹಾಗೂ ಹರಿಹರದ 14 ಜನರಿಗೆ ಕೊವಿಡ್ ಪಾಸಿಟಿವ್ ದೃಡಪಟ್ಟಿದೆ.
ದಾವಣಗೆರೆಯಲ್ಲಿ 25 ಹರಿಹರದ 48 ಜನರಿಗೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 102 ಜನ ಆಕ್ಟಿವ್ ಕೊವಿಡ್ ಪಾಸಿಟಿವ್ ರೋಗಿಗಳಿದ್ದಾರೆ.
ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೊವಿಡ್ ಕೇಸ್ ಗಳು ಏರಿಕೆ ರೀತಿಯಲ್ಲಿ ದಾಖಲಾಗುತ್ತಿದೆದ್ದು, ಸಾರ್ವಜನಿಕರು ಕೊವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಹೇಳುತ್ತಾ ಬಂದಿದ್ದರು ಜನರು ಕ್ಯಾರೆ ಎಂದಿಲ್ಲ.