Covid Updates: 37 ಜನರಿಗೆ ಕೊರೊನಾ ಪಾಸಿಟಿವ್.! 39 ಜನ ಕೊವಿಡ್ ಸೋಂಕಿನಿಂದ ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಇಂದು 37 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಮತ್ತು 39 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಜಿಲ್ಲೆಯಲ್ಲಿ 368 ಜನರಿಗೆ ಆರ್ ಟಿ ಪಿ ಸಿ ಆರ್ ಹಾಗೂ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು 16 ಜನ ದಾವಣಗೆರೆ ತಾಲ್ಲೂಕಿನವರಿಗೆ ಹಾಗೂ ಹರಿಹರದ 6 ಜನರಿಗೆ, ಚನ್ನಗಿರಿಯ 1, ಹೊನ್ನಾಳಿಯ 13 ಜನರಿಗೆ ಕೊವಿಡ್ ಪಾಸಿಟಿವ್ ದೃಡಪಟ್ಟಿದೆ.
ದಾವಣಗೆರೆಯಲ್ಲಿ 43 ಹರಿಹರದ 43 ಜನರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 136 ಜನ ಆಕ್ಟಿವ್ ಕೊವಿಡ್ ಪಾಸಿಟಿವ್ ರೋಗಿಗಳಿದ್ದಾರೆ.
ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೊವಿಡ್ ಕೇಸ್ ಗಳು ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿದ್ದಾರೆ.
ಸಾರ್ವಜನಿಕರು ಕೊವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಹೇಳುತ್ತಿದ್ದು, ಸಧ್ಯ ಪ್ರತಿದಿನಕ್ಕೆ 300 ಜನರಿಗೆ ಮಾತ್ರ ಕೊವಿಡ್ ಟೆಸ್ಟ್ ಪರೀಕ್ಷೆ ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.