ಮಹಾನಗರ ಪಾಲಿಕೆಗಳ 24 ನೇ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು: ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌ಗಳ (ಚುನಾವಣೆ) (ತಿದ್ದುಪಡಿ) 2020 ರ ಮಾರ್ಗಸೂಚಿಗಳ ಅಡಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಇಪ್ಪತ್ನಾಲ್ಕನೇ (24) ಅವಧಿಗೆ ವಿವಿಧ ಮಿಸಲಾತಿ ವರ್ಗಗಳಿಗೆ ಮೇಯರ್ ಮತ್ತು ಉಪ ಮೇಯರ್‌ಗಳ ಚುನಾವಣೆಗಾಗಿ ಸರ್ಕಾರವು ಈ ಮೂಲಕ ಮೀಸಲಾತಿ ಬಿಡುಗಡೆ ಮಾಡಿದೆ,
ದಾವಣಗೆರೆ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
23 ನೇ ಅವಧಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಎಸ್ ಸಿ ಮಹಿಳೆ ಮೀಸಲಾತಿಯಡಿ ಜಯಮ್ಮ ಗೋಪಿನಾಯ್ಕ್ ಹಾಗೂ ಉಪ ಮೇಯರ್ ಗಾಯಿತ್ರಿ ಭಾಯಿ ಸಾಮಾನ್ಯ ಮಹಿಳೆ ಮೀಸಲಾತಿಯಡಿ ನೇಮಕವಾಗಿದ್ದರು. ಇವರ ಅವಧಿ ಮುಕ್ತಾಯದ ನಂತರ ಮುಂದಿನ ಸರದಿ ಯಾರಿಗೆ ಎಂಬುದು ಕೂತುಹಲಕ್ಕೆ ಪಾಲಿಕೆ ಸದಸ್ಯರಲ್ಲಿ ಮೂಡಿದೆ.
24 ನೇ ಅವಧಿಗೆ ದಾವಣಗೆರೆ ಮಹಾನಗರ ಪಾಲಿಕೆಯ ಗದ್ದುಗೆ ಯಾರ ಪಾಲಾಗಬೇಕು ಎಂಬುದು ಸದಸ್ಯರು ಕಾದು ನೋಡುತ್ತಿದ್ದಾರೆ. ಈ ಭಾರಿಯ ಗದ್ದುಗೆಗೆ ಭಾರಿ ಜಿದ್ದಾ ಜಿದ್ದಿ ಏರ್ಪಡುವ ಸಂಭವ ಹೆಚ್ಚಾಗಿದೆ ಎನ್ನಲಾಗುತ್ತಿದೆ.