NIA ತಂಡದಿಂದ ದಾವಣಗೆರೆಯಲ್ಲಿ PFI ಮುಖಂಡನ ಬಂಧನ.!

ದಾವಣಗೆರೆ: ದಾವಣಗೆರೆ ಜಿಲ್ಲಾದ್ಯಕ್ಷ ಪಿಎಫ್ಐ ಮುಖಂಡನ ಬಂಧನ ಮಾಡಿದ ಎನ್ ಐ ಎ ಅಧಿಕಾರಿಗಳು. ದಾವಣಗೆರೆ ಪಿಎಫ್ಐ ಜಿಲ್ಲಾದ್ಯಕ್ಷ ಇಮಾನುದ್ದೀನ್ ವಶಕ್ಕೆ ಹಾಗೂ ಹರಿಹರ ಮೂಲದ ಆರ್ ಕೆ ತಾಹಿರ್ ಮನೆಯಲ್ಲಿ ಶೋಧನೆ ಮಾಡಲಾಗಿದೆ.
ಬೆಳಗ್ಗೆ ಇಮಾನುದ್ದೀನ್ ಮನೆಗೆ ಆಗಮಿಸಿದ್ದ ಎನ್ ಐ ಎ ಅಧಿಕಾರಿಗಳು.ಕೆಲ ಕಾಲ ಮನೆಯಲ್ಲಿಯೇ ವಿಚಾರಣೆ ನಡೆಸಿದ ಎನ್ ಐ ಎ ಅಧಿಕಾರಿಗಳು ಹಲವು ವರ್ಷಗಳಿಂದ ಪಿಎಫ್ಐ ನಲ್ಲಿ ಸಕ್ರಿಯವಾಗಿದ್ದ ಇಮಾನುದ್ದೀನ್. ಹರಿಹರ ಮೂಲದ ಯುವಕನ ದಾಖಲೆಗಳನ್ನ ವಶಕ್ಕೆ ಪಡೆದ ಎನ್ ಐ ಎ ಅಧಿಕಾರಿಗಳು.
ದಾವಣಗೆರೆಯ ಹರಿಹರದಲ್ಲಿ ಕೂಡ ಎನ್ ಐ ಎ ಅಧಿಕಾರಿಗಳ ದಾಳಿ. ದಾವಣಗೆರೆ ಹಾಗೂ ಹರಿಹರದಲ್ಲಿ ವಿಚಾರಣೆ ನಡೆಸಿರುವ ಎನ್ ಐ ಎ ಅಧಿಕಾರಿಗಳು. ಹರಿಹರ ಮೂಲದ ಆರ್ ಕೆ ತಾಹೀರ್ ಮನೆಯಲ್ಲಿ ವಿಚಾರಣೆ ನಡೆಸಿದ್ದಾರೆ, ತಾಹೀರ್ ಮನೆಯಲ್ಲಿ ಇಲ್ಲದೆ ಇರುವುದರಿಂದ ಅವನಿಗೆ ಸಂಬಂಧಿಸಿದ ಮುಖ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ದಾವಣಗೆರೆಯ ಮನೆಯಲ್ಲಿ ವಿಚಾರಣೆ ನಡೆಸಿ ಇಮಾದ್ ಉದ್ದಿನ್ ಅವರ ಲ್ಯಾಪ್ ಟ್ಯಾಪ್, ಮೊಬೈಲ್, ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಎನ್ ಐ ಎ ತಂಡ. ಎಸ್ ಡಿ ಪಿ ಐ ಹಾಗೂ ಪಿ ಎಪ್ ಐ ಲಿಂಕ್ ಮೇಲೆ ವಿಚಾರಣೆ ನಡೆಸಿದ ಎನ್ ಐ ಎ.
ಹರಿಹರ ಮೂಲದ ಆರ್ ಕೆ ತಾಹೀರ್ ಎನ್ ಐ ಎ ತಂಡ ಬಂದಾಗ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು ಕಳೆದ ರಾತ್ರಿ ದಾವಣಗೆರೆಯ ಸಂಬಂಧಿಕರ ಮನೆಯಲ್ಲಿ ತಪಾಸಣೆ ಮಾಡಲಾಗಿದೆ ಎನ್ನಲಾಗಿದೆ.