UAPA ಕಾಯ್ದೆಯಡಿ PFI ಸೇರಿ 8 ಅಂಗಸಂಸ್ಥೆಗಳನ್ನ 5 ವರ್ಷ ಬ್ಯಾನ್ ಮಾಡಿ ಆದೇಶಿಸಿದ ಕೇಂದ್ರ ಸರ್ಕಾರ

PFI ban India gazetteers released

ನವದೆಹಲಿ: ವಿದ್ವಾಂಸಕ ಕೃತ್ಯ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೆರಿ 8 ಅಂಗಸಂಸ್ಥೆಗಳನ್ನು 5 ವರ್ಷದವರೆಗೆ ಬ್ಯಾನ ಮಾಡಿದ ಕೇಂದ್ರ ಸರ್ಕಾರ.

ಯುಎಪಿಎ ಅಡಿ ಐದು ವರ್ಷಗಳ ಕಾಲ ನಿಷೇಧಿಸಿದ ಭಾರತ್ ಗೆಜೆಟಿಯರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಪಿ ಎಫ್ ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದೇಶಾದ್ಯಂತ ಪೊಲೀಸರು ದಾಳಿ ಮಾಡಿದ್ದು, ನೂರಾರು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ರಾಯಚೂರು, ಗದಗ, ಮಂಗಳೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ರಾಮನಗರ, ಚಾಮರಾಜನಗರ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿ ದಂತ ಹಲವೆಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

“ಕಾನೂನು ಬಾಹಿರ ಚಟುವಟಿಕೆ, ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಡಿ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನೇತೃತ್ವದಲ್ಲಿ ದಾಳಿ‌ನಡೆಸಲಾಗಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!