ಮೂರು ಲಕ್ಷ ಲಂಚ ಪಡೆಯುವಾಗ ಲೊಕಾಯುಕ್ತ ಬಲೆಗೆ ಬಿದ್ದ ದಾವಣಗೆರೆ ಪಾಲಿಕೆ ಮ್ಯಾನೇಜರ್ ವೆಂಕಟೇಶ್
ದಾವಣಗೆರೆ: ದಾವಣಗೆರೆ ಲೋಕಾಯುಕ್ತ ಪೋಲೀಸ್ ಭರ್ಜರಿ ದಾಳಿ ನಡೆಸ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಮೂರು ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್ ಇಂದು ಭಾನುವಾರ ರಜಾ ದಿನದಲ್ಲೂ ತಮ್ಮ ಕಚೇರಿಯ ಕೋಣೆಯಲ್ಲಿ ಕರಿಸಿಕೊಂಡು ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೋಲೀಸ್ ರಿಗೆ ಸಿಕ್ಕಿಬಿದ್ದಿದ್ದಾರೆ. ಕೃಷ್ಣಪ್ಪ ಎಂಬುವರಿಗೆ ಜಕಾತಿ ಟೆಂಡರ್ ಕೊಡಲು ಎಳು ಲಕ್ಷ ರೂಪಾಯಿಗೆ ಬೇಡಿಕೆಯನ್ನ ವೆಂಕಟೇಶ ಇಟ್ಟಿದ್ದ, ಈಗಾಗಲೇ ಎರಡು ಲಕ್ಷ ರೂಪಾಯಿಗಳನ್ನ ಅಡ್ವಾನ್ಸ್ ರೂಪದಲ್ಲಿ ಪಡೆದಿದ್ದರು,
ಇಂದು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ವೆಂಕಟೇಶ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್ .ಕೌಲಾಪುರೆ ನೇತ್ರತ್ವದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ದಾಳಿ ನಡೆಸಿದ್ದಾರೆ. ಲಂಚದ ಪಡೆದ ಹಣದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೂ ಪಾಲು ಇರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.