1 ವರ್ಷ ಆದ್ರೂ ಮುಗಿಯಲ್ಲ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ.! ಬಸಾಪುರ ಸರ್ಕಾರಿ ಶಾಲಾ ಕಟ್ಟಡದ ದುಸ್ಥಿತಿಗೆ ಕಂಗಾಲಾದ ಗ್ರಾಮಸ್ಥರು.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಸಲಾಗಿತ್ತು, ಆದರೆ ವರ್ಷಗಳೇ ಕಳೆದರೂ ಕಾಮಗಾರಿ ಮುಗಿಯದೆ ಇರುವುದರಿಂದ ಮಕ್ಕಳು, ಪೋಷಕರು ಬೇಸರಗೊಂಡು ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ ರವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇಂದು ಎಸ್.ಡಿ.ಎಂ.ಸಿ ಸಮಿತಿಯವರು ಪೋಷಕರು ಹಾಗೂ ಗ್ರಾಮಸ್ಥರು ಕಟ್ಟಡ ಕಾಮಗಾರಿಯ ಬಗ್ಗೆ ಶಾಲಾ ಸಮಿತಿ ಕರೆದ ಸಭೆಯಲ್ಲಿ ಭಾಗವಹಿಸಿ ಕಾಮಗಾರಿ ವೀಕ್ಷಣೆ ಮಾಡಿದರು, ಶೌಚಾಲಯ ನಿರ್ಮಾಣ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, 238 ಮಕ್ಕಳು ಶೌಚಾಲಯವಿಲ್ಲದೆ ಪಡುತ್ತಿರುವ ದೃಶ್ಯ ದೇವರಿಗೆ ಪ್ರೀತಿ.
ಹರೀಶ್ ಕೆ.ಎಲ್. ಬಸಾಪುರ ಶಾಲೆಯ ಕಾರಿಡಾರ್ ನಲ್ಲಿ ಹಾಕಲಾಗಿದ್ದ ಅವೈಜ್ಞಾನಿಕ ಕಲ್ಲುಗಳ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ವೀರೇಶ್ ರವರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಲಾಗಿ, ತಕ್ಷಣವೇ ಪ್ರತಿಕ್ರಿಯಿಸಿದ ಇಂಜಿನಿಯರ್ ಹೊಸ ಕಲ್ಲು ಹಾಕಿಸುವ ಮೂಲಕ ವ್ಯವಸ್ಥಿತವಾಗಿ ಕಾಮಗಾರಿ ಮುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಟಿಎಂಸಿ ಅಧ್ಯಕ್ಷ ರಮೇಶ್ ಗ್ರಾಮದ ಮುಖಂಡರಾದ ಎಂ.ಎಸ್ ಕೊಟ್ರಯ್ಯ, ಕರಿಬಸಪ್ಪ, ಲೋಕೇಶ್ವರಯ್ಯ, ತಿಪ್ಪೇಶ್ ಸೇರಿದಂತೆ ಎಸ್ ಟಿ ಎಂ ಸಿ ಸದಸ್ಯರು ಪೋಷಕರು ಉಪಸ್ಥಿತರಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಮೇಲಧಿಕಾರಿಗಳಿಗಿರುವ ಅಸಡ್ಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
*ಬಡವರ, ದಲಿತರು, ಹಿಂದುಳಿದ ವರ್ಗದವರ ಮಕ್ಕಳು ಓದುವ ಶಾಲೆಯ ಕಟ್ಟಡದ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗಿರುವ ಬೇಜವಾಬ್ದಾರಿ ಮಾತ್ರ ಖಂಡನೀಯ.*

 
                         
                       
                       
                       
                       
                       
                       
                      