ಹಿಂದುಳಿದ,ದಲಿತರ ಶಾಪವೇ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ಕಾರಣ ; ಬಾಡದ ಆನಂದರಾಜು

ದಾವಣಗೆರೆ : ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷವೆಂದರೆ ಜನರು ಪ್ರಾಣವನ್ನೇ ನೀಡಲು ಮುಂದಾಗುತ್ತಿದ್ದರು. ಅದರಲ್ಲೂ ದಲಿತರು, ಹಿಂದುಳಿದವರು ಕಾಂಗ್ರೆಸ್ ಪಕ್ಷವನ್ನ ದೇವರ ಸ್ಥಾನದಲ್ಲಿಟ್ಟಿದ್ದರು. ಕಾಂಗ್ರೆಸ್ ಪಕ್ಷ ಕೇವಲ ಮತಕ್ಕಾಗಿ ದಲಿತರು, ಹಿಂದುಳಿದವರನ್ನ ಬಳಿಸಿಕೊಳ್ಳುತಿತ್ತು, ಹೀಗಾಗಿ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದಕೊಂಡಿದೆ. ದಲಿತರು, ಹಿಂದುಳಿದವರನ್ನ ಕಾಂಗ್ರೆಸ್ ಪಕ್ಷದಲ್ಲಿ ದುಡಿಸಿಕೊಂಡು ಅಧಿಕಾರ ನೀಡದೆ ವಂಚನೆ ಮಾಡಿದೆ, ಇದರ ಶಾಪವೇ ಕಾಂಗ್ರೆಸ್ಗೆ ತಟ್ಟಿದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ತಿಳಸಿದ್ದಾರೆ.
ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಉಪ್ಪಾರ ಸಮಾಜದ ಹಿರಿಯಾ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎವೈ.ಪ್ರಕಾಶ್ ರವರನ್ನ ಸನ್ಮಾನಿಸಿ ಮಾತನಾಡಿತ್ತಾ ಇಂದು ಬಿಜೆಪಿ ಪಕ್ಷ ಹಿಂದುಳಿದವರು, ದಲಿತರಿಗೂ ಸಹ ಅಧಿಕಾರ ನೀಡಿ ಸಮಾನತೆ ಸಾರಿದೆ. ಇದಕ್ಕೆ ಸಾಕ್ಷಿ ಜಿಲ್ಲೆಯ ಹಲವು ಹಿಂದುಳಿದ ಹಾಗೂ ದಲಿತ ನಾಯಕರಿಗೆ ಅಧಿಕಾರ ನೀಡಿರುವುದು ಈ ಹಿಂದೆ ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಇಂದಿನ ಅಧ್ಯಕ್ಷರಾದ ಪ್ರಕಾಶ್ ಸೇರಿದಂತೆ ಹಲವು ಹಿಂದುಳಿದ ನಾಯಕರಿಗೆ ಅಧಿಕಾರ ನೀಡಿರುವುದಲ್ಲದೇ ದಲಿತ ಮಹಿಳೆ ಜಯಮ್ಮ ಗೋಪಿನಾಯ್ಕ್ ರವರಿಗೆಮಹಾಪೌರ ಸ್ಥಾನ ನೀಡಿದ್ದು. ಇದರ ಫಲವಾಗಿಯೇ ಬಿಜೆಪಿಯತ್ತಾ ಹಿಂದುಳಿದ, ದಲಿತ ಸೇರಿದಂತೆ ಹಲವಾರು ಸಮಾಜದವರು ಬಿಜೆಪಿಯತ್ತ ಮುಖ ಮಾಡಿರುವುದು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಘನತೆಯನ್ನ ಎತ್ತಿ ಹಿಡಿಯುತ್ತಿದೆ. ಇನ್ನೂ ಬುಡಕಟ್ಟು ಜನಾಂಗದ ಮಹಿಳೆಗೆ ರಾಷ್ಟಪತಿ ಹುದ್ದೆ ನೀಡಿದೆ, ಇಂಥ ಎಷ್ಟು ದಲಿತ ಹಿಂದುಳಿದವರಿಗೆ ಅಧಿಕಾರ ನೀಡುವ ಮೂಲಕ ಎಲ್ಲಾ ಜಾತಿಗೂ ಸಮಾನತೆ ಸಾರವನ್ನ ಬಿತ್ತಿದೆ. ಇನ್ನೂ ಜಿಲ್ಲೆಯಲ್ಲಿ ಸರ್ವ ಸಮಾಜದವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜೋಡಿ ಎತ್ತುಗಳಾದ ಸಂಸದರಾದ ಸಿದ್ದೇಶ್ವರ್ ಹಾಗೂ ಶಾಸಕರಾದ ರವೀಂದ್ರನಾಥ್ ಅವರು ಜಿಲ್ಲೆಯ ದಲಿತ ಹಿಂದುಳಿದವರನ್ನ ಗುರುತಿಸಿ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಹಲವು ಹುದ್ದೆಗಳನ್ನ ದಲಿತ ಹಿಂದುಳಿದವರಿಗೆ ನೀಡಿ ಸಮಾನತೆ ಎತ್ತಿ ಹಿಡಿದಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಸಿಎಂ ಸಿದ್ದರಾಮಯ್ಯ ಕೇವಲ ಹೆಸರಿಗಷ್ಟೇ ಅಹಿಂದ ನಾಯಕ ಅವರ ಅಧಿಕಾರದ ಅವಧಿಯಲ್ಲಿ ಎಷ್ಟು ಜನ ದಲಿತರಿಗೆ, ಹಿಂದುಳಿದವರಿಗೆ ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ದಲಿತರು ಹಿಂದುಳಿದವರನ್ನ ಕೇವಲ ಓಟ್ ಬ್ಯಾಂಕಿಂಗ್ ಮಾಡಿಕೊಂಡಿದೆ ವಿನಃ ಅಧಿಕಾರ ನೀಡಿ ಸಮಾನತೆ ಸಾರಲಿಲ್ಲ. ಹೀಗಾಗಿಯೇ ಅವರಿಗೆ ಶಾಪ ತಟ್ಟಿದೆ ಎಂದು ಬಾಡದ ಆನಂದರಾಜು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷ ದಲಿತರು ಹಿಂದುಳಿದವರನ್ನ ಕಡೆಗಣಿಸಿದ್ದು ಇಂದು ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದೆ. ಬಿಜೆಪಿ ಪಕ್ಷ ಎಲ್ಲರಿಗೂ ಅಧಿಕಾರ ಹಂಚಿಕೆ ಮಾಡಿ ಅಧಿಕಾರ ಮಾಡುತ್ತಿದೆ. ಈ ದೇಶ, ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ರವೀಂದ್ರನಾಥ್ ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನ ಸೂರ್ಯ ಚಂದ್ರ ಎಷ್ಟು ಸತ್ಯವೂ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಇದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮಹಾಪೌರ ಎಸ್.ಟಿ.ವಿರೇಶ್.ಬಿಜೆಪಿ ಹಿರಿಯಾ ದಲಿತ ಮುಖಂಡ ಆಲೂರು ನಿಂಗರಾಜ್.ಪಾಲಿಕೆ ಸದಸ್ಯರಾದ ಮಂಜುನಾಯ್ಕ್.ಸಿ.ವಿ.ನರೇಂದ್ರಕುಮಾರ್.ಶ್ಯಾಮನೂರು ಗಿರೀಶ್.ಮಾಜಿ ಸದಸ್ಯ ಶಿವನಗೌಡ ಪಾಟೇಲ್.ಟಿಂಕರ್ ಮಂಜಣ್ಣ.ಅಂಗವಿಕಲ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಕುಮಾರ್ ಇನ್ನೂ ಮುಂತಾದವರಿದ್ದರು.

 
                         
                       
                       
                       
                       
                       
                       
                      