ಸಿಸಿ ರಸ್ತೆಗೆ ಆಗ್ರಹಿಸಿಮಕ್ಕಳಿಂದ ಪ್ರತಿಭಟನೆ.! ವಾರ್ಡ್ ಸದಸ್ಯರಿಂದ ಪಾಲಿಕೆಗೆ ಪತ್ರ.!

ದಾವಣಗೆರೆ: 43 ನೇ ವಾರ್ಡ್ ಶಾಮನೂರು ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದ ಬನ್ನಿ ಮರದಿಂದ ಗಿರಿಯಳ್ಳ ಪರಮೇಶ್ವರಪ್ಪ ಮನೆಯವರೆಗೆ ಸಿ.ಸಿ. ರಸ್ತೆಯ ಕಾಮಗಾರಿಗೆ ಆಗ್ರಹಿಸಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ್ರು.
ಮಹಾನಗರ ಪಾಲಿಕೆಯ 44 ನೇ ವಾರ್ಡ್ ವ್ಯಾಪ್ತಿಯ ಶಾಮನೂರು ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ರಸ್ತೆಯು ದುರಸ್ತಿಗೊಂಡಿದ್ದು ಶಾಲಾ ಮಕ್ಕಳು ಓಡಾಡಲು ತೊಂದರೆಯಾಗುತ್ತಿದ್ದು ಸದರಿ ವಿಷಯದ ಬಗ್ಗೆ ಆ ಭಾಗದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಾರ್ವಜನಿಕರು ತುರ್ತಾಗಿ ರಸ್ತೆ ದುರಸ್ತಿ ಸರಿ ಪಡಿಸಲು ವಾರ್ಡ್ ಸದಸ್ಯರಿಗೆ ಮನವಿ ಸಲ್ಲಿಸಿದ್ದರು. ಈ ಕೆಲಸವು ತುಂಬಾ ಅವಶ್ಯವಾಗಿ ಕೈಗೊಳ್ಳಬೇಕಾಗಿರುವುದರಿಂದ ತುರ್ತಾಗಿ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರವನ್ನ ಬರೆದಿದ್ದಾರೆ.

 
                         
                       
                       
                       
                       
                       
                       
                      