ಬರೋಬ್ಬರಿ 1,472 ಐಎಎಸ್, 864 ಐಪಿಎಸ್ ಹುದ್ದೆಗಳ ಭರ್ತಿಗೆ ಕೇಂದ್ರ ಕ್ರಮ

ದೆಹಲಿ: ದೇಶದಲ್ಲಿ ಒಟ್ಟು 6,789 ಐಎಎಸ್ ಅಧಿಕಾರಿಗಳ ಹುದ್ದೆಗಳಿದ್ದು 1,472 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಐಎಎಸ್ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆದಿದೆ.
ಇದೇ ವೇಳೆ, ವಿವಿಧ ರಾಜ್ಯಗಳಲ್ಲಿ ಹಾಗೂ ಕೇಂದ್ರ ಸರ್ಕಾರದ ಸೇವೆಯಲ್ಲಿ 864 ಐಪಿಎಸ್ ಅಧಿಕಾರಿಗಳ ಹುದ್ದೆ ಖಾಲಿ ಇದ್ದು ಅವುಗಳ ಭರ್ತಿಗೂ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಈ ನಡುವೆ, ವಿವಿಧ ಇಲಾಖೆಗಳೂ ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ತೆರವಾಗಿವೆ ಎಂಬ ಸಂಗತಿಯನ್ನೂ ಸರ್ಕಾರ ಬಹಿರಂಗಪಡಿಸಿದೆ.

 
                         
                       
                       
                       
                       
                       
                       
                      