BSNLನಲ್ಲಿ ಸದ್ಯದಲ್ಲೇ 4G-5G ಸೇವೆಗಳ ಲಭ್ಯ; ತ್ವರಿತ ಅನುಷ್ಠಾನಕ್ಕೆ ಕ್ರಮ

ದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ BSNLನಲ್ಲಿ ಸದ್ಯದಲ್ಲೇ 4G-5G ಸೇವೆಗಳ ಲಬ್ಯವಾಗಲಿವೆ. ಈ ಸಂಬಂಧ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಅತೀ ಶೀಘ್ರವೇ 4ಜಿ ಮತ್ತು 5ಜಿ ಸೇವೆಗಳನ್ನು ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆಗೆ ಮಾಹಿತಿ ಒದಗಿಸಿದ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು
ಭಾರತದಲ್ಲಿ ಮೊಬೈಲ್ ಡೇಟಾ ದರ ಒಂದು ಜಿಬಿ ಡೇಟಾಕ್ಕೆ 20 ರೂ.ಗಳಿಗಿಂತ ಕಡಿಮೆ ಇದೆ ಎಂದ ಅವರು, ಇದು ಜಗತ್ತಿನವಿತರ ದೇಶಗಳಿಗೆ ಹೋಲಿಸಿದರೆ ಅತೀ ಕಡಿಮೆ ದರವಾಗಿದೆ ಎಂದರು.

 
                         
                       
                       
                       
                       
                       
                       
                      