ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವಾಕ್-ಇನ್-ಇಂಟರ್ವೂವ್ ಏರ್ಪಾಡು

ದಾವಣಗೆರೆ: ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಡಿ.17 ರಂದು ಬೆ.10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್-ಇನ್-ಇಂಟರ್ವೂವ್‍ನ್ನು ಏರ್ಪಡಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್ ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ,ದಾವಣಗೆರೆ ಇಲ್ಲಿ ಭಾಗವಹಿಸಿ ಸದರಿ ವಾಕ್ ಇನ್ ಇಂಟವ್ರ್ಯೂವ್ ನ ಸದುಪಯೋಗ ಪಡೆದುಕೊಳ್ಳಬಹುದು.
ಈ ವಾಕ್-ಇನ್-ಇಂಟವ್ರ್ಯೂವ್ ನಲ್ಲಿ ಖಾಸಗಿ ಕಂಪನಿ ಭಾಗವಹಿಸುತ್ತಿದ್ದು, ಪಿಯುಸಿ, ಐಟಿಐ, ಡಿಪ್ಲಮೋ, ಬಿ.ಇ, ಹಾಗೂ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿದ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ 08192-259446 6361550016 ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.