ಕನ್ನಡ ಜ್ಯೋತಿ ಹೊತ್ತ ರಥದ ಸ್ವಾಗತಕ್ಕೆ ದಾವಣಗೆರೆಯಲ್ಲಿ ಸಕಲ ಸಿದ್ಧತೆ

ದಾವಣಗೆರೆ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023 ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆಯಲಿರುವ ಪ್ರಯುಕ್ತ ಭಾವೈಕ್ಯತೆಯ ಸಂಕೇತವಾಗಿ ನಾಡಿನಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ವು 25.12.2022ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ನಗರಕ್ಕೆ ಆಗಮಿಸಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇವರೊಂದಿಗೆ ಸಮನ್ವಯ ಸಾಧಿಸಿ ಕನ್ನಡ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶದ ಮೂಲಕ ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಯ ನೌಕರ ಬಂಧುಗಳು ಶಾಲಾ ಕಾಲೇಜು ಅಧ್ಯಾಪಕ ಶಿಕ್ಷಕ ಬಂಧುಗಳು, ಗ್ರಾಮ ಪಂಚಾಯಿತಿ ಪಿಡಿಓ ಅಧ್ಯಕ್ಷರು ಮತ್ತು ಸದಸ್ಯರು ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ವನ್ನು ವಿಜೃಂಭಣೆಯಿಂದ ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ರಥಯಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ಆದೇಶದೊಂದಿಗೆ ನಿರ್ದೇಶನ ನೀಡಿರುತ್ತಾರೆ.
ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ಮೇಲಿನ ಆದೇಶಗಳನ್ನುಯ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ನೌಕರ ಬಂಧುಗಳಿಗೆ ಶಾಲಾ-ಕಾಲೇಜು ಮುಖ್ಯಸ್ಥರು ಅಧ್ಯಾಪಕರು ಶಿಕ್ಷಕ ಬಂಧುಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಪಿಡಿಒಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆ, ತಾಲೂಕು,ಹೋಬಳಿ ಘಟಕಗಳ ಪದಾಧಿಕಾರಿ ಬಂಧುಗಳು, ಸಾಹಿತಿಗಳು ವಿದ್ವಾಂಸರು ಲೇಖಕರು ಕವಿಗಳು ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥ ಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿ ರಥ ಯಾತ್ರೆಯನ್ನು ಯಶಸ್ವಿ ಗೊಳಿಸಬೇಕಾಗಿ ಕೋರಿದ್ದಾರೆ.
ಕನ್ನಡ ಜ್ಯೋತಿ ಹೊತ್ತ ರಥ ದಾವಣಗೆರೆ ಜಿಲ್ಲೆಯಲ್ಲಿ ಸಂಚರಿಸುವ ಮಾರ್ಗ.
ಹಾವೇರಿಯಲ್ಲಿ 2023 ರ ಜನವರಿ 6,7 ಮತ್ತು 8 ರಂದು ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾವೈಕ್ಯತೆಯ ಸಂಕೇತವಾಗಿ ಹೊರಟ ಕನ್ನಡ ಜ್ಯೋತಿ ಹೊತ್ತ ರಥವು 24.12.2022 ರ ಶನಿವಾರ ಮಧ್ಯಾಹ್ನ 2:30 ಗಂಟೆಗೆ ಚನ್ನಗಿರಿಗೆ ಆಗಮಿಸಲಿದ್ದು ಸಂಜೆ ಅಲ್ಲಿ ತಂಗಲಿದೆ. 25.12.2022 ರ ಭಾನುವಾರ ಬೆಳಿಗ್ಗೆ 8:30 ಕ್ಕೆ ಚನ್ನಗಿರಿಯಿಂದ ಹೊರಟು ದೇವರಹಳ್ಳಿ ಕಾಕನೂರು ಸಂತೆಬೆನ್ನೂರು ತಣಿಗೆರೆ ಮಾರ್ಗವಾಗಿ ದಾವಣಗೆರೆ ತಾಲೂಕಿಗೆ ಪ್ರವೇಶ ಹೊಂದುವುದು. ದಾವಣಗೆರೆ ತಾಲೂಕಿನ ಬಾಡ ಗ್ರಾಮದಿಂದ ಹೊರಟು ದ್ಯಾಮೇನಹಳ್ಳಿ ರಾಮಗೊಂಡನಹಳ್ಳಿ,ಅತ್ತಿಗೆರೆ, ಹಿರೇತೋಗಲೇರಿ, ಕುರ್ಕಿ, ದಾವಣಗೆರೆ ವಿಶ್ವವಿದ್ಯಾನಿಲಯ, ತೋಳಹುಣಸೆ, ಬಾಡ ಕ್ರಾಸ್ ತಲುಪಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾ ಪಂಚಾಯಿತಿ ಯ ಮುಂಭಾಗ ಹಹಾದು ವಿದ್ಯಾನಗರದ ಆಂಜನೇಯ ದೇವಸ್ಥಾನ ತಲುಪುವುದು. ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಮಹಾನಗರ ಪಾಲಿಕೆ ಆವರಣ ತಲುಪಿ ತಂಗುವುದು. ಮರುದಿನ 26.12.2022 ರ ಸೋಮವಾರ ಬೆಳಗ್ಗೆ 8:30 ಕ್ಕೆ ಮಹಾನಗರಪ್ರಕಟಣೆಯ ಕೃಪೆ ಕೋರಿ.