ರೋಚಕ ಕ್ರಿಕೆಟ್ ಪಂದ್ಯಾವಳಿಯ ಹಣಾಹಣಿಯಲ್ಲಿ ಗೆದ್ದ ಶಿವಮೊಗ್ಗ ತಂಡ, ದ್ವಿತೀಯ ಸ್ಥಾನ ಪಡೆದ ದಾವಣಗೆರೆ ತಂಡ

ದಾವಣಗೆರೆ: ಚಿತ್ರದುರ್ಗದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬಸವರಾಜ್ ಕೋಟಿ, ವಿನಯ್ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾ ಆಹ್ವಾನಿತ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿತ್ತು, ಅಂತಿಮವಾಗಿ ಶಿವಮೊಗ್ಗ ತಂಡ ಪ್ರಥಮ, ದಾವಣಗೆರೆ ತಂಡ ದ್ವಿತೀಯ ಸ್ಥಾನ ಪಡೆಯಿತು..
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಮಾಧ್ಯಮ ತಂಡ ಸತತ ನಾಲ್ಕು ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆಯಿತು.. ಸೆಮಿ ಫೈನಲ್ ನಲ್ಲಿ ವಿಜಯನಗರ ತಂಡವನ್ನ ಬಗ್ಗು ಬಡೆದು, ಫೈನಲ್ ಪ್ರವೇಶ ಪಡೆಯಿತು, ಎರಡನೇ ಸೆಮಿಫೈನಲ್ ನಲ್ಲಿ ಚಿತ್ರದುರ್ಗ ತಂಡನ್ನು ಮಣಿಸಿ ಶಿವಮೊಗ್ಗ ತಂಡ ಫೈನಲ್ ಗೆ ಎಂಟ್ರಿ ನೀಡಿತು..
ಫೈನಲ್ ಪಂದ್ಯ ದಾವಣಗೆರೆ ಹಾಗೂ ಶಿವಮೊಗ್ಗ ತಂಡಗಳ ನಡುವೆ ರೋಚಕ ಕಾದಾಟ ನಡೆಯಿತು, ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡ 5 ಓವರ್ ಗಳಲ್ಲಿ 61 ರನ್ ಫೇರಿಸಿತು, ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ದಾವಣಗೆರೆ ತಂಡ ಮೊದಲು ಸಿಕ್ಸ್, ಫೋರ್ ಮೂಲಕ ಸಖತ್ ಫೈಟ್ ನೀಡಿತು, ಕೊನೆಯಲ್ಲಿ 12ರನ್ ಗಳಿಂದ ಸೋಲು ಕಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು..
ಪ್ರಥಮ ಬಹುಮಾನ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನ ಶಿವಮೊಗ್ಗ ತಂಡ ಪಡೆದರೆ, ದ್ವಿತೀಯ ಬಹುಮಾನ 15 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿಯನ್ನ ದಾವಣಗೆರೆ ಪ್ರೆಸ್ ಕ್ಲಬ್ ತಂಡ ಪಡೆಯಿತು, ತೃತೀಯ ಬಹುಮಾನವನ್ನ 10 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನ ಚಿತ್ರದುರ್ಗ ತಂಡ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸಿಇಒ ದಿವಾಕರ್, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರ. ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧುನಾಗರಾಜ್ ಕುಂದುವಾಡ, ಕ್ರೀಡಾ ಕಾರ್ಯದರ್ಶಿ ರಾಮಪ್ಪ ಸೇರಿದಂತೆ ಆಟಗಾರರು ಇದ್ದರು.

 
                         
                       
                       
                       
                       
                       
                       
                      