ದಾವಣಗೆರೆ. ಪ್ರಸಕ್ತ ೨೦೨೨-೨೩ನೇ ಸಾಲಿನ ಬೇಸಿಗೆ ಬೆಳೆಗಳಿಗೆ ಎಡದಂಡೆ ನಾಲೆಗೆ ೦೧.೦೧.೨೦೨೩ರ ರಾತ್ರಿಯಿಂದ ಹಾಗೂ ಭದ್ರಾ ಬಲದಂಡೆ ನಾಲೆ, ಆನವೇರಿ ಶಾಖಾನಾಲೆ, ದಾವಣಗೆರೆ, ಮಲೇಬೆನೂರು ಶಾಖಾನಾಲೆ ಮತ್ತು ಹರಿಹರ ಶಾಖಾನಾಲೆಗಳಿಗೆ ೦೩.೦೧.೨೦೨೩ರ ರಾತ್ರಿಯಿಂದ ನೀರು ಹರಿಸಲಾಗುವುದೆಂದು ಕನೀನಿನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ