26 ಸಲ ಟ್ರಾಫಿಕ್ ರೂಲ್ಸ್ ಬ್ರೇಕ್.! 16 ಸಾವಿರ ದಂಡದ ಸ್ಲಿಪ್ ನೀಡಿದ ಪೋಲಿಸ್

ದಾವಣಗೆರೆ: ವ್ಯಕ್ತಿಯೊಬ್ಬರು ಹಲವಾರು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆ ಬೈಕ್ ಸವಾರನಿಗೆ ದಾವಣಗೆರೆ ಪೊಲೀಸರು 16,000 ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದ ನಿವಾಸಿ ವೀರೇಶ ಸಂಚಾರ ನಿಯಮ ಉಲ್ಲಂಘಿಸಿದವರು. ವಿರೇಶ್ ನಗರದ ವಿವಿಧೆಡೆ ಒಟ್ಟು 26 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದರು ಈ ಸಂಬಂಧ ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ, ಸಂಬಂಧ 23 ಪ್ರಕರಣ, ಹಾಗೂ ಬೈಕ್ ಚಲಿಸುವಾಗ ಮೊಬೈಲ್ ಬಳಕೆ ಸಂಬಂಧ ಮೂರು ಪ್ರಕರಣ ದಾಖಲಾಗಿತ್ತು. ತಪಾಸಣೆ ವೇಳೆ ಪೊಲಿಸರು ಬೈಕ್ ವಿವರ ತೆಗೆದಾಗ ಉದ್ದನೆಯ ರಸೀದಿ ಕಂಡು ನಿಬ್ಬೆರಗಾಗಿದ್ದಂತು ನಿಜ.