Exclusive: 4 ದಿಕ್ಕಿನ ಕಾಂಪೌಂಡ್ ನಿರ್ಮಿಸದೆ 17 ಲಕ್ಷ ಸ್ವಾಹ ಮಾಡಿದ ನಿರ್ಮಿತಿ ಕೇಂದ್ರ.!

ದಾವಣಗೆರೆ: ಸರ್ಕಾರ ಹಲವಾರು ಯೋಜನೆಯ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಹಣ ಬಿಡುಗಡೆ ಮಾಡುತ್ತೆ. ಆದ್ರೆ ಇಲ್ಲೊಂದು ಇಲಾಖೆಯ ಅಧಿಕಾರಿಗಳು ಆ ಹಣವನ್ನ ಸ್ವಾಹ ಮಾಡೋಕೆ ಉಟ್ಟಿದೆ ಎನ್ನುವ ರೀತಿ ವರ್ತಿಸುತ್ತಿದೆ.
ಹೌದು ಈ ಇಲಾಖೆ ಬೇರೆ ಯಾವುದು ಅಲ್ಲ ದಾವಣಗೆರೆಯ ನಿರ್ಮಿತಿ ಕೇಂದ್ರ. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಅನುದಾನವನ್ನು ಪಡೆದು ತಮ್ಮ ಇಲಾಖೆಯ ಕಾಮಗಾರಿಗಳನ್ನ ಉತ್ತಮ ರಿತೀಯಲ್ಲಿ ಮಾಡಬೇಕು ಅಂತಾ ಹಣವನ್ನ ಬಿಡುಗಡೆ ಮಾಡುತ್ತೆ, ಆದ್ರೆ ಇಲ್ಲಿನ ಕೆಲ ಅಧಿಕಾರಿಗಳ ಹಣದ ಹಪಾಪಿತನಕ್ಕೆ ನಲುಗಿ ಹೋಗಿ ವ್ಯಾಪಕವಾಗಿ ಬ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗಂಭೀರವಾದ ಆರೋಪಗಳು ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ.
2021-22 ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ ದಾವಣಗೆರೆ ಜಿಲ್ಲಾಪಂಚಾಯತಿ ಸಾಮಾನ್ಯಸಭೆ ನಡೆಸಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ನೀಡಿತ್ತು. ಅದರಲ್ಲೂ ಜಿಲ್ಲೆಯಲ್ಲಿಯೇ ಅತೀ ಹಿಂದುಳಿದ ಬರಪೀಡಿತ ತಾಲ್ಲೂಕು ಎನಿಸಿಕೊಂಡಿರುವ ಜಗಳೂರು ತಾಲ್ಲೂಕಿನಲ್ಲಿನ ಒಂದು ಕಾಮಗಾರಿಗೆ 17 ಲಕ್ಷ ಹಣವನ್ನ ಬಿಡುಗಡೆ ಮಾಡಲಾಗಿತ್ತು. ಆದ್ರೆ ಆ ಕಾಮಗಾರಿಯನ್ನು ಮಾಡದೇ ಸಂಪೂರ್ಣವಾಗಿ ಕಾಮಗಾರಿಗೆ ಬಿಡುಗಡೆಯಾದ ಹಣವನ್ನ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ದಾವಣಗೆರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು.
ಜಗಳೂರು ತಾಲ್ಲೂಕು ಪಂಚಾಯತಿ ವತಿಯಿಂದ ಹನುಮಂತಾಪುರ ಗ್ರಾಮದ ವ್ಯಾಪ್ತಿಗೆ ಸೇರಿದ ಗೊಲ್ಲರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಿಸಲು 17 ಲಕ್ಷ ಹಣವನ್ನ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿತ್ತು. ಶಾಲೆಯ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ದಿಕ್ಕಿನ ಭಾಗಕ್ಕೆ ಕಾಂಪೌಂಡ್ ನಿರ್ಮಾಣದ ಕಾಮಗಾರಿಗೆ ಒಂದೊಂದು ದಿಕ್ಕಿಗೆ ತಲಾ 4 ಲಕ್ಷದಂತೆ ಒಟ್ಟು 17 ಲಕ್ಷ ಹಣ ನೀಡಿತ್ತು. ಆದ್ರೆ ಶಾಲೆಯನ್ನು ನೋಡಿದ್ರೆ ಅಲ್ಲಿ ಹೊಸದಾಗಿ ನಿರ್ಮಿಸಿದ ಯಾವುದೇ ಕಾಂಪೌಂಡ್ ಇರುವುದಿಲ್ಲ ಎಂಬ ಸತ್ಯ ಗರುಡವಾಯ್ಸ್/ಗರುಡಚರಿತೆ ಕಣ್ಣಿಗೆ ಸಿಕ್ಕಿರುವ ದಾಖಲೆಗಳಿಂದ ಕಾಣಸಿಗುತ್ತೆ.

ಶಾಲೆಯ ಹಿಂಬಾಗದಲ್ಲಿ ಉಳುಮೆ ಮಾಡುವ ಜಮೀನು ಇದೆ, ಅದಕ್ಕೂ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಹಣ ಲಪಟಾಯಿಸಲಾಗಿದೆ. 4 ಭಾಗದಲ್ಲಿ ಯಾವಾಗ ಕಾಂಪೌಂಡ್ ಮಾಡಿದ್ದಾರೋ ಆ ದೇವರೆ ಬಲ್ಲ. ಜಗಳೂರು ಶಾಸಕರು ತಾಲ್ಲೂಕಿನ ಅಭಿವೃದ್ದಿಗೆ ಹಗಲು ರಾತ್ರಿ ಎನ್ನದೆ ಕೊಟ್ಯಾಂತರ ರೂಪಾಯಿ ಸರ್ಕಾರದಿಂದ ಬಿಡುಗಡೆ ಮಾಡಿಸಿ ಕಾಮಗಾರಿಗಳನ್ನ ಮಾಡಿಸುತ್ತಿದ್ದೆನೆ ಅಂತಾ ಎಲ್ಲಾ ಕಾರ್ಯಕ್ರಮಗಳಲ್ಲಿ ಹೇಳುತ್ತಾ ಓಡಾಡುತ್ತಿದ್ದರೆ, ಈ ಅಧಿಕಾರಿಗಳು ಆ ಹಣವನ್ನ ತಮ್ಮ ಜೇಬನ್ನ ತುಂಬಿಸಿಕೊಳ್ಳುತ್ತಾ ಓಡಾಡುತ್ತಿದ್ದಾರೆ. ಇನ್ನೂ ಮಾಜಿ ಶಾಸಕರು ಜಗಳೂರು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎನ್ನಬಹುದು.
ದಾವಣಗೆರೆ ನಿರ್ಮಿತಿ ಕೇಂದ್ರದಿಂದ ಜಿಲ್ಲೆಯಲ್ಲಿ ನಡೆಯುವ ಹಾಗೂ ನಡೆದಿರುವ ಹಲವಾರು ಕಾಮಗಾರಿಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿದ್ದೂ, ಇನ್ನೂ ಅನೇಕ ಕಾಮಗಾರಿಗಳನ್ನ ಇದೇ ರೀತಿಯಲ್ಲಿ ಮಾಡಲಾಗಿರುವ ಬಗ್ಗೆ ಹಲವು ದಾಖಲೆಗಳ ಮೂಲಕ ಇಂತಹ ನಿದರ್ಶನಗಳು ಸಿಗುತ್ತಿವೆ. ಅದರಲ್ಲೂ ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತು ಹಲವು ವರ್ಷಗಳೇ ಕಳೆದು ಹೋಗಿವೆಯಂತೆ, ಸರ್ಕಾರದ ಹಣವನ್ನ ಈ ರೀತಿ ಪೋಲು ಮಾಡಲು ಅಧಿಕಾರ ನೀಡಿದವರು ಯಾರೂ ಇವರ ಆಟೋಟಪಗಳಿಗೆ ಬ್ರೇಕ್ ಬೀಳೊದು ಯಾವಾಗ ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ ಎಂದು ಸರ್ಕಾರಿ ಅಧಿಕಾರಿಗಳೇ ಮಾತನಾಡುತ್ತಿದ್ದಾರೆ.
ಒಟ್ಟಾರೆ ಸರ್ಕಾರದ ಹಣ ಬಿಡುಗಡೆ ಆದ್ರೆ ಸಾಕು ಅದನ್ನ ಹೇಗೆ ನಮ್ಮ ಜೇಬಿಗೆ ಸೇರಿಸಬಹುದು ಎನ್ನುವ ಲೆಕ್ಕಾಚಾರದ ಅಧಿಕಾರಿಗಳಿಗೆ ಇದೀಗ ಬಂದಿರುವ ಸರ್ಕಾರದ ನೂತನ ಕಾನೂನುಗಳು ಆದಷ್ಟು ಬೇಗನೆ ಇಂತವರನ್ನ ಸುತ್ತಿಕೊಳ್ಳೊದರಲ್ಲಿ ಅನುಮಾನವೇ ಇಲ್ಲ ಎನ್ನಬಹುದಾಗಿದೆ.

 
                         
                       
                       
                       
                       
                       
                       
                      