ಹೊಸ ವರ್ಷದ ಆಚರಣೆಗೆ ಮಧ್ಯರಾತ್ರಿ 1 ಗಂಟೆ ಡೆಡ್ ಲೈನ್ : ಎಸ್ ಪಿ ಖಡಕ್ ಸೂಚನೆ

Davanagere sp Ryshyanth gives new year guidelines follow rules

ದಾವಣಗೆರೆ ; ಹೊಸ ವರ್ಷ ಆಚರಣೆ ಮಾಡಲು ಬೆಣ್ಣೆ ನಗರಿ ಸಜ್ಜಾಗಿದ್ದು, ಈಗಾಗಲೇ ಎಲ್ಲ ರೆಸ್ಟೋರೇಂಟ್, ಪ್ರವಾಸಿ ತಾಣ ಪುಲ್ ಆಗಿದೆ…ಅಲ್ಲದೇ ಎಂಜಾಯ್ ಮಾಡಲು ಯುವ ಪಡೆ ಸಜ್ಜಾಗಿದೆ..ಆದರೆ ಈ ಖುಷಿಗೆ ಮದ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಎಸ್ಪಿ ಸಿ.ಬಿ.ರಿಷ್ಯಂತ್ ಡೆಡ್ ಲೈನ್ ನೀಡಿದ್ದಾರೆ..ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಜೈಲು ಊಟ ಗ್ಯಾರಂಟಿ.

ಹೊಸ ವರ್ಷಾಚರಣೆ ವೇಳೆ ತ್ರಿಬಲ್ ರೆಡ್ಡಿಂಗ್, ರಸ್ತೆಯಲ್ಲಿ ಕಿರುಚಾಟ, ಕೇಕ್ ಕೊಯ್ಯುವಂತಿಲ್ಲ..ಜನರಿಗೆ ತೊಂದರೆ ಕೊಡುವ ಆಗಿಲ್ಲ..ಸೀಮೀತ ಸ್ಥಳದಲ್ಲಿ ಮಾತ್ರ ನ್ಯೂ ಇಯರ್ ಸೆಲಿಬ್ರೆಷನ್ ಮಾಡಬೇಕು ಎಂದು ಎಸ್ಪಿ ಹೇಳಿದ್ದಾರೆ.

ಒಂದು ವೇಳೆ ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಎಚ್ಚರದಿಂದ ಇರಬೇಕು.
ಈಗಾಗಲೇ ಹೊಸ ವರ್ಷಾಚರಣೆ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಭೆ ನಡೆಸಲಾಗಿದೆ. ಪ್ರತ್ಯೇಕ
ತಂಡಗಳನ್ನು ರಚಿಸಿದ್ದು, ಅವುಗಳು ಸಂಜೆಯಿಂದಲೇ ಕಾರ್ಯಾಚರಣೆ ನಡೆಸುತ್ತಿವೆ. ಗುಂಪಾಗಿ ಹೋಗಿ ಗಲಾಟೆ ಮಾಡುವವರು ಕಂಡುಬಂದರೆ ಅವರನ್ನು ಠಾಣೆಗೆ ಕರೆದೊಯ್ಯಲಾಗುವುದು’ ಎಂದರು.

‘ರಸ್ತೆಯನ್ನು ಬಂದ್ ಮಾಡಿ ಕೇಕ್ ಕತ್ತರಿಸುವುದು, ತ್ರಿಬಲ್ ರೈಡಿಂಗ್, ಬೈಕ್‌ನಲ್ಲಿ ಕಿರುಚಿಕೊಂಡು ವೇಗವಾಗಿ ಸಂಚರಿಸುವುದಕ್ಕೆ ಅವಕಾಶವಿಲ್ಲ. ಅಂದು ರಾತ್ರಿ ಹೋಮ್‌ ಗಾರ್ಡ್‌ ಸಿಬ್ಬಂದಿ ಬಳಸಿಕೊಂಡು ಗಸ್ತು ಹೆಚ್ಚಿಸಲಾಗುವುದು‌ ಆದ್ದರಿಂದ ಸೀಮಿತ ಅವಧಿಯಲ್ಲಿಯೇ ನ್ಯೂ ಇಯರ್ ಆಚರಣೆ ಮಾಡಬೇಕು ಎಂದು ಎಸ್ಪಿ ಹೇಳಿದರು.

ಎಲ್ಲ ಹೊಸ ವರ್ಷಾಚರಣೆಯನ್ನು ಔಟ್ ಡೋರ್ ಮಾಡಬೇಕು, ಇನ್ ಡೋರ್ ಮಾಡುವ ಆಗಿಲ್ಲ..ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಮಾಸ್ಕ್ ಕಡ್ಡಾಯ..ಸ್ವಲ್ಪ ಜನರು ಇದ್ದರೆ ಮಾತ್ರ ಒಳಗೆ ನ್ಯೂಯರ್ ಸೆಲಿಬ್ರೆಷನ್ ಮಾಡಬೇಕು.ಹಿರಿಯ ನಾಗರಿಕರು ಆಚೆ ಹೋಗಬಾರದು. ಕೊರೊನಾ ಇರುವುದರಿಂದ ಹಿರಿಯ ನಾಗರಿಕರು ಎಚ್ಚರದಿಂದ ಇರಬೇಕು.ರೆಸ್ಟೋರೇಂಟ್ ಮಾಲೀಕರು, ಸಿಬ್ಬಂದಿಗಳು, ಅಡುಗೆ ಸಿಬ್ಬಂದಿಗಳು ಬೂಸ್ಟರ್ ಡೋಸ್ ಹಾಕಿಸಿಕೊಂಡಿರಬೇಕು. ಇದು ಕಡ್ಡಾಯ. ಚಲನ ಚಿತ್ರಮಂದಿರದಲ್ಲಿ ಎನ್ 95 ಮಾಸ್ಕ್ ಹಾಕಬೇಕು. ದೇಹದ ಉಷ್ಣಾಂಶವನ್ನು ಎಲ್ಲ ಕಡೆ ಚೆಕ್ ಮಾಡಬೇಕು.. ಕೊರೊನಾ ಲಕ್ಷಣಗಳು ಕಂಡು ಬಂದರೆ ಅಂತಹವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಎಸ್ಪಿ ಸೂಚಿಸಿದ್ದಾರೆ.ಒಟ್ಡಾರೆ ನ್ಯೂ ಇಯರ್ ಆಚರಣೆ ಪೊಲೀಸ್ ಸರ್ಪಗಾವಿನಲ್ಲಿ ನಡೆಯಲಿದ್ದು, ಎಲ್ಲರೂ ಎಚ್ಚರದಿಂದ ಇರಬೇಕಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!