ಕಬ್ಬು ಬೆಳೆಗಾರರಿಂದ ಅಹೋರಾತ್ರಿ ಸತ್ಯಾಗ್ರಹ, ನಿತ್ಯವೂ ಐವರಿಂದ ನಿರಶನ.. ಸ್ಪಂಧಿಸದ ಸರ್ಕಾರದ ವಿರುದ್ದ ಆಕ್ರೋಶ
ಬೆಂಗಳೂರು: ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹ 36ನೇ ದಿನದವಾದ ಇಂದೂ ಮುಂದುವರಿಯಿತು. ಆಹೋರಾತ್ರಿ ಧರಣಿ ನಿರತ ರೈತರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡರು..
13 ದಿನಗಳ ಹಿಂದೆ ಧರಣಿ ನಿರತ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಕಬ್ಬಿನ ದರ ಎರಿಕೆಯ ಭರವಸೆ ನೀಡಿದ್ದ ಮುಖ್ಯಮಂತ್ರಿ, ಈ ತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಕೇವಲ ಮಾತಿನ ಭರವಸೆ ಬೇಡ ನ್ಯಾಯಸಮ್ಮತ ಕಬ್ಬು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.,
ಈ ಸರದಿ ಉಪವಾಸದ ಎರಡನೇ ದಿನವಾದ ಇಂದು ಹತ್ತಳ್ಳಿ ದೇವರಾಜ್, ಹಾಡ್ಯರವಿ , ಶ್ರೀಮತಿ ಎಂ ಕಮಲಮ್ಮ ಮೈಸೂರು ಜಿಲ್ಲೆ. ಗುರುಸಿದ್ದಪ್ಪ ಕೂಟಗಿ, ಮಡಿವಾಳಪ್ಪ ಬೆಳಗಾವಿ ಅವರು ನಿರಶನ ಕೈಗೊಂಡರು. ನಿತ್ಯವೂ ಐವರು ರೈತರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡರೆ, ಉಳಿದ ರೈತರು ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದರು.