ಪ್ರಕೃತಿದತ್ತವಾದ ಶರೀರಕ್ಕೆ ಆಯುರ್ವೇದವೇ ಮದ್ದು:ಡಾ.ಶಂಕರ್ ಗೌಡ
ದಾವಣಗೆರೆ: ಪ್ರಕೃತಿದತ್ತವಾದ ಶರೀರಕ್ಕೆ ಆಯುರ್ವೇದದ ಆಹಾರವೇ ಮದ್ದು, ಆಯುರ್ವೇದ ಪದ್ದತಿಯಲ್ಲಿ ತಿಳಿಸಲಾದ ಪದ್ದತಿಯನ್ನು ಎಲ್ಲರೂ ಮೈಗೂಡಿಸಿಕೊಂಡರೆ ಮನುಷ್ಯನಿಗೆ ಯಾವುದೇ ರೋಗ ರುಜಿನಗಳು ಎದುರಾಗುವುದಿಲ್ಲ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್ಗೌಡ ತಿಳಿಸಿದರು.
ಬುಧವಾರ ಹೊನ್ನಾಳಿ ತಾಲ್ಲೂಕಿನ ಚಿಕ್ಕಗೋಣಿಗೆರೆ ಗ್ರಾಮದಲ್ಲಿ ಆಯುಷ್ ಇಲಾಖೆಯ ವತಿಯಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಿರೇಗೋಣಿಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಯುಷ್ ಸೇವಾಗ್ರಾಮ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
೨೦೨೨-೨೩ನೇ ಸಾಲಿನಲ್ಲಿ ಆಯುಷ್ ಇಲಾಖೆಯಿಂದ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿರುವ ೭ನೇ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮದೇ ಆದ ಪುರಾತನ ಪದ್ದತಿಯನ್ನು ರೂಢಿ ಮಾಡಿಕೊಳ್ಳುವ ಜೊತೆಗೆ ದೇಶಿ ಪದ್ದತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಗ್ರಾಮದ ಮುಖಂಡ ಬಸವಣ್ಯಪ್ಪ ಮಾತನಾಡಿ, ಇಂತಹ ವಿನೂತನ ಕಾರ್ಯಕ್ರಮವು ಆಯುಷ್ ಇಲಾಖೆಯಿಂದ ನಮ್ಮ ಊರ ಬಾಗಿಲಿಗೆ ಬಂದಿದ್ದು ಅದರ ಉಪಯೋಗ ಪಡೆಯಿರೆಂದು ಕರೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಬಸವಣ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ವೈದ್ಯಾಧಿಕಾರಿ ಡಾ.ಯಶವಂತ್ ಸ್ವಾಗತ ಕೋರಿದರು. ನಾಗವೇಣಿ ಪ್ರಾರ್ಥನೆ ಮಾಡಿದರು. ಡಾಸಿದ್ದೇಶ್ರವರು ಕಾರ್ಯಕ್ರಮ ನಿರೂಪಿಸಿದರೆ, ಡಾ.ರೇವ್ಯಾನಾಯ್ಕ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾ.ರೇವ್ಯನಾಯ್ಕ, ಡಾ.ಕವಿತಾ, ಡಾ.ಪ್ರೀತಿ.ಡಿ.ಎಸ್, ಡಾ.ಪ್ರಭಾಕರ ಶಿರಹಟ್ಟಿ, ಡಾ.ಸಿದ್ದೇಶ್ ಈ ಬಿಸನಳ್ಳಿ ಮತ್ತು ಆರೋಗ್ಯ ಇಲಾಖೆಯ ರೇವಣಸಿದ್ದಪ್ಪ, ಚೇತನ, ವಿರುಪಾಕ್ಷಿ, ಶೃತಿ ಕೆ.ಎಮ್ ಇದ್ದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘದ ಪದಾಧಿಕಾರಿಗಳು, ಆಯುಷ್ ಇಲಾಖೆ ಸಿಬ್ಬಂದಿ ಇದ್ದರು. ಈ ವೇಳೆ ೧೩೦ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ನಂತರ ಉಚಿತವಾಗಿ ಔಷಧಿಯನ್ನು ನೀಡಲಾಯಿತು.