ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಇ-ಸ್ವತ್ತು: ಬೆಣ್ಣೆ ನಗರಿಯ ಗಂಗನಕಟ್ಟೆಯ ದಿವಾಕರ್‌ರಿಂದ ವಿನೂತನ ಯೋಜನೆ

ಚಿತ್ರದುರ್ಗ : ತಮ್ಮ ಆಸ್ತಿಯನ್ನು ಡಿಜಿಟಲ್ ಮೂಲಕ ಇ-ಸ್ವತ್ತು ಮಾಡಿಸಲು ಸಾವಿರಾರು ರೂ.ಲಂಚ ತೆಗೆದುಕೊಳ್ಳುತ್ತಿದ್ದ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಿಇಒ, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಗಂಗನಕಟ್ಟೆ ಗ್ರಾಮದ ದಿವಾಕರ್ ಹೊಸ ನಿರ್ಧಾರವೊಂದನ್ನು ಕೈಗೊಂಡಿದ್ದುಘಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಇ-ಸ್ವತ್ತು ನೀಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಬರುತ್ತಿದೆ.
ಹೌದು..ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯೊಂದನ್ನು ಜಿಲ್ಲಾ ಪಂಚಾಯಿತಿ ಸಿಇಒ ಕೈಗೊಂಡಿದ್ದುಘಿ, ಚಿತ್ರದುರ್ಗ ತಾಲ್ಲೂಕಿನ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು ಗ್ರಾಮದಲ್ಲಿ ಮೊದಲ ಬಾರಿಗೆ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮ ಹಮ್ಮಿಕೊಂಡು ಮನೆ ಮಾಲೀಕರ ಮನೆ ಬಾಗಿಲಿಗೆ, ಅವರ ಆಸ್ತಿಗೆ ಸಂಬಂಧಿಸಿದ ಇ -ಸ್ವತ್ತು ಪ್ರಮಾಣ ಪತ್ರವನ್ನು ಗ್ರಾಮದಲ್ಲಿ ವಿತರಿಸಿದರು. ಅಲ್ಲದೇ 15 ದಿನಗಳಲ್ಲಿ ಸುಮಾರು 4 ಲಕ್ಷ ರೂ. ತೆರಿಗೆ ಸಂಗ್ರಹವಾಗಿದ್ದು, ತೆರಿಗೆಯನ್ನು ಜನರು ತಾವೇ ಸ್ವತ: ಬಂದು ಪಾವತಿಸಿರುವ ದೃಶ್ಯ ಸಾಮಾನ್ಯವಾಗಿದೆ.

ಇ-ಸ್ವತ್ತು ಮಾಡಿಸಲು ಕೇವಲ 50 ರೂ.ಖರ್ಚಾಗಲಿದ್ದುಘಿ, ಬೆಳಗ್ಗೆ 7 ಗಂಟೆಗೆ ಮನೆ ಬಿಡುವ ಸಿಇಒ ಹತ್ತು ಗಂಟೆತನಕ ಇ-ಸ್ವತ್ತು ವಿತರಣೆ ಮಾಡಲು ಹೋಗುತ್ತಿದ್ದಾರೆ. ನಂತರ ಜಿಲ್ಲಾ ಪಂಚಾಯಿತಿ ಕಚೇರಿಯ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಸಲು ಹತ್ತರಿಂದ-ಹದಿನೈದು ಸಾವಿರ ರೂ. ಹಣವನ್ನು ಪಿಡಿಒ, ಮಧ್ಯವರ್ತಿಗಳ ಮೂಲಕ ಪಡೆಯುತ್ತಿದ್ದರು. ಯಾರಾದರೂ ಸ್ವತಃ ಮಾಡಿಸಬೇಕೆಂದರೆ ಪಂಚಾಯಿತಿಯಲ್ಲಿ ಹೋಗಿ ಪಿಡಿಒರನ್ನು ಕಾಯಬೇಕಾದ ಅನಿವಾರ್ಯತೆ ಇತ್ತುಘಿ. ಅಲ್ಲದೇ ಪಿಡಿಒಗಳು ನಾನಾ ಸಬೂಬುಗಳನ್ನು ಹೇಳುತ್ತಿದ್ದರು. ಅಲ್ಲದೇ ತೆರಿಗೆಯೂ ಕೂಡ ಜನರಿಂದ ಬರುತ್ತಿರಲಿಲ್ಲಘಿ. ಪರಿಣಾಮ ಸರಕಾರಕ್ಕೆ , ಸ್ಥಳೀಯ ಆಡಳಿತಕ್ಕೆ ಸಾಕಷ್ಟು ಹಣ ಪೋಲಾಗುತ್ತಿತ್ತುಘಿ. ಆದರೀಗ ಸಾವಿರಾರೂ ರೂಗಳಲ್ಲಿ ತೆರಿಗೆ ಬರುತ್ತಿದೆ. ಇ-ಆಸ್ತಿ ಮಾಡುವುದರಿಂದ ಯಾವುದೇ ಡೂಪ್ಲಿಕೇಶನ್ ಆಗದ ಕಾರಣ ಇದನ್ನು ಡಿಜಿಟಲ್ ಮಾಡಲಾಗುತ್ತಿದೆ.
ಇದೊಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ, ಮನೆ ಬಾಗಿಲಿಗೆ ಇ -ಸ್ವತ್ತು ವಿತರಣೆ ಮಾಡುವ ವಿನೂತನ ಕಾರ್ಯಕ್ರಮವಾಗಿದ್ದು, ಗುತ್ತಿನಾಡು ಗ್ರಾಮದಲ್ಲಿ ಅಧಿಕೃತವಾಗಿ ಪ್ರಾರಂಭ ಮಾಡಲಾಗಿದೆ. ಇಡೀ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದವರಿಗೆ ವಿಳಂಬವಿಲ್ಲದೇ ಸಕಾರದ ಸೇವೆ ಇನ್ನು ಮುಂದೆ ಸುಲಭವಾಗಿ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿ.ಪಂ. ಸಿಇಒ ಎಂ.ಎಸ್. ದಿವಾಕರ್ ಅವರು ಹೇಳಿದರು.

ಇತ್ತೀಚೆಗೆ ಗ್ರಾಮ ಪಂಚಾಯ್ತಿಯಲ್ಲಿ ಇ-ಸ್ವತ್ತು ವಿತರಣೆ ಮಾಡುವಾಗ ಅನಾವಶ್ಯಕ ವಿಳಂಬ ಮತ್ತು ಮದ್ಯವರ್ತಿಗಳ ಹಾವಳಿಯಿಂದ ತೊಂದರೆಯಾಗುತ್ತಿರುವುದು ಕಂಡುಬಂದಿದೆ. ನಮ್ಮ ಜಿಲ್ಲೆಯಲ್ಲೂ ಸಹ ಕೆಲವು ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಂದ ದೂರು ಅರ್ಜಿಗಳು ಬಂದಿದ್ದರಿಂದ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಸಂಬಂಧ ಏರ್ಪಡಲು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ಕಂದಾಯ ವಸೂಲಿ. ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸರಕಾರದ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿಯ ಎಲ್ಲಾ ಸಿಬ್ಬಂದಿಗಳು ಆ ಭಾಗದಲ್ಲಿ ಬರತಕ್ಕಂತಹ ಎಲ್ಲಾ ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನ ಮೊದಲೇ ಪಡೆದು, ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಮಾಲೀಕರು ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರ, ಅವರ ಮನೆ ಮನೆಗೆ ಖುದ್ದು ಭೇಟಿ ನೀಡಿ, ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಲು ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುತ್ತಿನಾಡು ಹಾಗೂ ಎಂ.ಆರ್.ಕಾಲೋನಿಯ ನಿವಾಸಿಗಳಿಗೆ ಸುಮಾರು 80ಕ್ಕೂ ಹೆಚ್ಚು ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಗಳ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಇ-ಸ್ವತ್ತು ಪಡೆಯಲು ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಸದಸ್ಯರು ಮಾತನಾಡಿ, ಪಂಚಾಯ್ತಿಗಳಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ವಿಳಂಬ ನೀತಿಯಿಂದ ಜಿಲ್ಲಾ ಪಂಚಾಯ್ತಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು. ಇದೀಗ ಇಂತಹ ಸೇವಾ ಕಾರ್ಯದಿಂದ ಜನರ ಅಭಿಪ್ರಾಯ ಬದಲಾಗಿದ್ದು, ಸಂತಸ ವ್ಯಕ್ತಪಡಿಸಿರುತ್ತಾರೆ. ಇ-ಸ್ವತ್ತು ಪ್ರಮಾಣಪತ್ರ ವಿತರಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರುಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

 
                         
                       
                       
                       
                       
                      