ವೆಂಕಟೇಶ್ವರ ಕ್ಯಾಂಪ್ನಲ್ಲಿ ವೈಕುಂಠ ಏಕಾದಶಿ ವೈಭವ

ದಾವಣಗೆರೆ: ಇಲ್ಲಿಗೆ ಸಮೀಪದ ಚನ್ನಗಿರಿ ತಾಲ್ಲೂಕಿನ ಕೆಂಪನಹಳ್ಳಿ ವೆಂಕಟೇಶ್ವರ ಕ್ಯಾಂಪ್ನಲ್ಲಿನ ಶ್ರೀದೇವಿ ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ನಾಡಿದ್ದು ದಿನಾಂಕ 2ರ ಸೋಮವಾರ ಧನುರ್ಮಾಸದ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೈಭವ  ನಡೆಯಲಿದೆ.
ಅಂದು ಬೆಳಗಿನ ಜಾವ 3.30ರ ಬ್ರಾಹ್ಮಿ ಮುಹೂರ್ತದಲ್ಲಿ ಉತ್ತರ ದ್ವಾರ ದರ್ಶನ, ಶ್ರೀದೇವಿ ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿ ವಿಶೇಷ ಪಂಚಾಮೃತ ಅಭಿಷೇಕ, ದಿವ್ಯ ವಜ್ರಕಚಿತ ಆಭರಣ ಅಲಂಕಾರ ಸೇವೆ ಜರುಗಲಿದೆ.
ವೈಕುಂಠ ಏಕಾದಶಿ ಮಹಾಪರ್ವದಂದು ಸ್ವಾಮಿಯ ಮಂದಿರದಲ್ಲಿ ವಿಶೇಷ ಅನುಷ್ಠಾನ ಪೂಜೆ ಆಯೋಜಿಸಲಾಗಿದ್ದು, ಭಕ್ತರು ದಂಪತಿ ಸಮೇತ ಆಗಮಿಸಿ, ತನು-ಮನ-ಧನ ಅರ್ಪಿಸಿ, ತೀರ್ಥ ಪ್ರಸಾದ ಸ್ವೀಕರಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಹಾಗೂ ಅರ್ಚಕರು ಕೋರಿದ್ದಾರೆ.
ವಿವರಗಳಿಗೆ ದೇವಸ್ಥಾನ ಸಮಿತಿ ಮತ್ತು ಅರ್ಚಕರು, ಅಪ್ಪಾಜಿ  ವರಪ್ರಸಾದ್ ಶರ್ಮ, ವೆಂಕಟೇಶ್ವರಪುರ (94822 09123,  99455 58558) ಇವರನ್ನು ಸಂಪರ್ಕಿಸಬಹುದು.

 
                         
                       
                       
                       
                       
                       
                       
                      