ಮೆಟ್ರೋ ಪಿಲ್ಲರ್ ಬಿದ್ದು ತಾಯಿ- ಮಗು ಸಾವು.! ದಾವಣಗೆರೆಯಲ್ಲಿ ತಾಯಿ ಮಗು ಅಂತ್ಯಕ್ರಿಯೆ
ದಾವಣಗೆರೆ: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ- ಮಗು ಸಾವು,
ಬೆಳಗಿನ ಜಾವ 2 ಗಂಟೆ ಸರಿ ಸುಮಾರು ದಾವಣಗೆರೆಯ ಬಸವೇಶ್ವರ ನಗರದಲ್ಲಿನ ಮನೆಗೆ ಇಬ್ಬರ ಮೃತದೇಹಗಳು ತಲುಪಿದವು. ಈ ನಡೆವೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ದಾವಣಗೆರೆಯ ಪಿ.ಬಿ ರಸ್ತೆ ಬಳಿ ಇರುವ ವೈಕುಂಠ ಏಕಧಾಮದಲ್ಲಿ ತಾಯಿ ತೇಜಸ್ವಿನಿ ಅಂತ್ಯಕ್ರಿಯೆ ನಡೆಸಲಿದ್ದಾರೆ ಹಾಗೂ ಮಗುವಿಗೆ ಗ್ಲಾಸ್ ಹೌಸ್ ಬಳಿಯ ಬಾಟಲ್ ಬಿಲ್ಡಿಂಗ್ ಹಿಂಭಾಗದ ರುದ್ರಭೂಮಿಯಲ್ಲಿ ವಿಹಾನ್ ಚಿತಾಭಸ್ಮದಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ. ಭಾವಸಾರ ಕ್ಷತ್ರಿಯ ಸಮಾಜದ ವಿಧಿ ವಿಧಾನದಂತೆ ತಾಯಿ ಮಗುವಿನ ಅಂತ್ಯಕ್ರಿಯೆ ಜರುಗಲಿದೆ.
ಕಾಮಗಾರಿಯ ಗುತ್ತಿಗೆದಾರರು ಮತ್ತು ಉಪ ಗುತ್ತಿಗೆದಾರರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರನ್ನು ಮತ್ತು ಎಂಜಿನಿಯರಗಳನ್ನು ಬಂಧಿಸಿ ಜೈಲಿಗೆ ಕಳಿಸುವಂತೆ ಒತ್ತಾಯಿಸಿದರು. ದಾವಣಗೆರೆಯಲ್ಲಿ ಮೃತ ತೇಜಸ್ವಿನಿ ದೊಡ್ಡಪ್ಪ ರಾಘವೇಂದ್ರ ರಾವ್ ಒತ್ತಾಯಿಸಿದರು.
ಕಾಂಟ್ರಾಕ್ಟರ್ ನನ್ನ ಕಪ್ಪು ಪಟ್ಟಿಗೆ ಸೇರಿಸಿ ಜೈಲಿಗೆ ಕಳಿಸುವಂತೆ ಆಗ್ರಹಿಸಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ದೇಶಾದ್ಯಂತ ಎಲ್ಲ ಗುತ್ತಿಗೆದಾರರಿಗೂ ಬಿಗಿ ಕ್ರಮ ಜರುಗಿಸಬೇಕು.
ಹಿಂದೆಯೂ ಇಂಥ ಘಟನೆಗಳು ನಡೆದಾಗ ಆಗಲೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕಿತ್ತು.
ಆಗ ಸುಮ್ಮನೆ ಇದ್ದು ಈಗ ನೋಟಿಸ್ ಕೊಟ್ಟರೆ ಏನು ಪ್ರಯೋಜನ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.
ಪ್ರಧಾನಿ ಮೋದಿ ಆಗಲಿ, ರಾಜ್ಯ ಸರ್ಕಾರ ಆಗಲಿ ಈ ಕುರಿತು ಗಂಭೀರ ಚಿಂತನೆ ಮಾಡಬೇಕು. ಇದಕ್ಕೆ ಕಾರಣರಾದ ಗುತ್ತಿಗೆದಾರರಿಗೆ ಸರ್ಕಾರ ಕಾಮಗಾರಿ ಹಣ ಮಂಜೂರು ಮಾಡಬಾರದು.ಇದರಿಂದ ಉಳಿದ ಗುತ್ತಿಗೆದಾರರಿಗೆ ಎಚ್ಚರಿಕೆ ಸಂದೇಶ ನೀಡಿದಂತಾಗುತ್ತದೆ. ನಮ್ಮ ಟ್ಯಾಕ್ಸ್ ಹಣವನ್ನು ಅವರಿಗೆ ನೀಡುತ್ತಿರಿ, ಅವರು ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ.
ದಾವಣಗೆರೆಯಲ್ಲಿ ಮೆಟ್ರೋ ಗುತ್ತಿಗೆದಾರರು ಮತ್ತು ಎಂಜಿನಿಯರ್ ವಿರುದ್ಧ ಆಕ್ರೋಶ ಹೊರಹಾಕಿದ ರಾಘವೇಂದ್ರ ರಾವ್ ಹಾಗೂ ಮೃತರ ಕುಟುಂಬಸ್ಥರು.