ಪೊಲೀಸ್ ಇಲಾಖೆ ನಿವೃತ್ತ ಶಾಖಾಧೀಕ್ಷಕರಾದ ಡಿ. ಗೋಣಿಬಸಪ್ಪ ನಿಧನ

Retired Superintendent of Police D. Gonibasappa passed away

ದಾವಣಗೆರೆ: ನಗರದ ನಿಜಲಿಂಗಪ್ಪ ಬಡಾವಣೆ ನಿವಾಸಿ, ಪೊಲೀಸ್ ಇಲಾಖೆಯ ನಿವೃತ್ತ ಶಾಖಾಧೀಕ್ಷಕರಾದ ಡೊಳ್ಳಿನವರ ಡಿ. ಗೋಣಿಬಸಪ್ಪ(73)ನವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು..

ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯ ಅಮೃತನಂದಮಯಿ ಶಾಲೆ ಎದುರಿನ 10ನೇ ಕ್ರಾಸ್ ಬಳಿಯ ನಿವಾಸದಲ್ಲಿ ಬುಧವಾರ ರಾತ್ರಿ 7.30ಗಂಟೆಯವರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ..

ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಹೊಂದಿರುವ ಮೃತರ ಅಂತ್ಯಕ್ರಿಯೆ ಸ್ವಗ್ರಾಮ ವಿಜಯನಗರ ಜಿ. ಹೂವಿನಹಡಗಲಿ ತಾಲ್ಲೂಕಿನ ಕೊಯಿಲಾರಗಟ್ಟೆ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 12ಗಂಟೆಗೆ ಜರುಗಲಿದೆ.

Leave a Reply

Your email address will not be published. Required fields are marked *

error: Content is protected !!