ದಾವಣಗೆರೆ ಸರ್ಕಲ್ ಇನ್‌ಸ್ಪೆಕ್ಟರ್ ಆರ್.ಪಿ. ಅನಿಲ್ ಸೇರಿದಂತೆ ರಾಜ್ಯದ 20 ಪೊಲಿಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

DAVANAGERE CIRCLE INSPECTOR R.P. President's Medal to 20 police personnel of the state including Anil

ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕದ 20 ಪೊಲೀಸ್ ಸಿಬ್ಬಂದಿ ಸೇರಿ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ದಾವಣಗೆರೆ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ. ಅನಿಲ್ ಸಹ ಪದಕಕ್ಕೆ ಭಾಜನರಾಗಿದ್ದಾರೆ. ಗಣರಾಜ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ.
ಪದಕ ಪಡೆದವರ ವಿವರ ಹೀಗಿದೆ – 2023ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ: ಕೆ.ವಿ. ಶರತ್ ಚಂದ್ರ, ಎಡಿಜಿಪಿ, ಸಿಐಡಿ
2023ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ: 1) ಲಾಭುರಾಮ್, ಡಿಐಜಿ, ಗುಪ್ತದಳ 2) ಎಸ್‌. ನಾಗರಾಜು, ಡಿವೈಎಸ್ಪಿ, ಪೊಲೀಸ್ ಪ್ರಧಾನ ಕಚೇರಿ ‍ 3) ಪಿ.ವೀರೇಂದ್ರ ಕುಮಾರ್, ಡಿವೈಎಸ್ಪಿ, ಕೆಎಲ್‌ಎ 4) ಬಿ. ಪ್ರಮೋದ್‌ಕುಮಾರ್, ಡಿವೈಎಸ್ಪಿ, ಕೆಎಲ್‌ಎ 5) ಸಿದ್ಧಲಿಂಗಪ್ಪ ಗೌಡ ಆರ್. ಪಾಟೀಲ, ಡಿವೈಎಸ್ಪಿ, ಲೋಕಾಯುಕ್ತ 6) ಸಿ.ವಿ. ದೀಪಕ್, ಡಿವೈಎಸ್ಪಿ, ಎಸ್‌ಟಿಎಫ್ 7) ಎಚ್‌. ವಿಜಯ್, ಡಿವೈಎಸ್ಪಿ, ಬೆಂಗಳೂರು ನಗರ ವಿಶೇಷ ವಿಭಾಗ 8) ಬಿ.ಎಸ್. ಮಂಜುನಾಥ್, ಇನ್‌ಸ್ಪೆಕ್ಟರ್, ಮಾದನಾಯಕನಹಳ್ಳಿ ಠಾಣೆ 9) ರಾವ್ ಗಣೇಶ್ ಜನಾರ್ದನ್, ಇನ್‌ಸ್ಪೆಕ್ಟರ್, ಬೆಂಗಳೂರು ಅಶೋಕನಗರ ಸಂಚಾರ ಠಾಣೆ 10) ಆರ್‌.‍‍ಪಿ. ಅನಿಲ್, ಸರ್ಕಲ್ ಇನ್‌ಸ್ಪೆಕ್ಟರ್, ದಾವಣಗೆರೆ. 11) ಮನೋಜ್ ಎನ್. ಹೋವಳೆ, ಇನ್‌ಸ್ಪೆಕ್ಟರ್, ಬೆಂಗಳೂರು ಸಂಚಾರ ಮತ್ತು ಯೋಜನೆ. 12) ಬಿ.ಟಿ. ವರದರಾಜ, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 3ನೇ ಪಡೆ. 13) ಟಿ.ಎ. ನಾರಾಯಣ್ ರಾವ್, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ. 14) ಎಸ್‌.ಎಸ್. ವೆಂಕಟರಮಣ ಗೌಡ, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ. 15) ಎಸ್.ಎಂ. ಪಾಟೀಲ, ಸ್ಪೆಷಲ್ ಆರ್‌ಪಿಐ, ಕೆಎಸ್‌ಆರ್‌ಪಿ 9ನೇ ಪಡೆ. 16) ಕೆ. ಪ್ರಸನ್ನಕುಮಾರ್, ಹೆಡ್ ಕಾನ್‌ಸ್ಟೆಬಲ್, ಸಿಐಡಿ. 17) ಎಚ್‌. ಪ್ರಭಾಕರ್, ಹೆಡ್‌ ಕಾನ್‌ಸ್ಟೆಬಲ್, ತುಮಕೂರು ಸಂಚಾರ ಪಶ್ಚಿಮ ಠಾಣೆ. 18) ಡಿ. ಸುಧಾ, ಮಹಿಳಾ ಹೆಡ್‌ ಕಾನ್‌ಸ್ಟೆಬಲ್, ಎಸ್‌ಸಿಆರ್‌ಬಿ. 19) ಟಿ.ಆರ್. ರವಿಕುಮಾರ್, ಹೆಡ್‌ ಕಾನ್‌ಸ್ಟೆಬಲ್, ಬೆಂಗಳೂರು ನಿಯಂತ್ರಣ ಕೊಠಡಿ


ರಾಜ್ಯವಾರು ಪ್ರಶಸ್ತಿಗಳ ಪೈಕಿ ಉತ್ತರ ಪ್ರದೇಶ 74, ಮಹಾರಾಷ್ಟ್ರ 39, ತಮಿಳುನಾಡು 21 ಪಶ್ವಿಮ ಬಂಗಾಳ 20, ಕರ್ನಾಟಕದಲ್ಲಿ 19, ಬಿಹಾರ ಹಾಗು ದೆಹಲಿ ತಲಾ 17 ಪ್ರಶಸ್ತಿ ಪಡೆಯುವ ಮೂಲಕ ಮಂಚೂಣಿಯಲ್ಲಿವೆ. ವಿವಿಧ ಭದ್ರತಾ ಪಡೆಗಳಾದ ಸಿಆರ್ ಪಿಎಫ್ 58, ಬಿಎಸ್ ಎಫ್ 47, ಸಿಐಎಸ್ ಎಫ್ 24, ಸಿಬಿಐ 24, ಗುಪ್ತಚರ ಇಲಾಖೆ 26 ಸೇರಿದಂತೆ ವಿವಿಧ ಭದ್ರತಾ ಪಡೆಗಳು ತಮ್ಮ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಸೇವಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!