ಸಿದ್ಧಗಂಗಾ 10ನೇ ತರಗತಿ ಭೂಮಿಕಾ ಮುತ್ತಗಿಗೆ ಅಸಾಧಾರಣ ಪ್ರತಿಭೆ ಪ್ರಶಸ್ತಿ

ದಾವಣಗೆರೆ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದಾವಣಗೆರೆ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿಯನ್ನು ನಗರದ ಸಿದ್ಧಗಂಗಾ ಶಾಲೆಯ 10ನೇ ತರಗತಿ ಬಾಲಕಿ ಭೂಮಿಕಾ ಮುತ್ತಗಿ ಪಡೆದಿದ್ದಾಳೆ. ನಗರದ ಕ್ರೀಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜುರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ 10 ಸಾವಿರ ರೂ. ಗಳ ಬಹುಮಾನ ನೀಡಿದ್ದಾರೆ. ಭೂಮಿಕಾ ಮುತ್ತಗಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

 
                         
                       
                       
                       
                       
                       
                       
                      