ಕುಸಿದು ಬಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ.! ಚಿಕಿತ್ಸೆ ನಂತರ ಬೆಂಗಳೂರಿಗೆ ತೆರಳಿದ ಸಾಹಿತಿ

sahithi baraguru Ramachandrappa

ದಾವಣಗೆರೆ : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಹರಿಹರದ ಅಕ್ಷಯ್ ಆಸ್ಪತ್ರೆಗೆ ಭಾನುವಾರ ದಾಖಲು ಮಾಡಲಾಗಿದೆ. ದಾವಣಗೆರೆಯಲ್ಲಿ ಬಂಡಾಯ ಸಾಹಿತಿಗಳಿದ್ದುಘಿ, ಈ ಹಿಂದೆ ಬಂಡಾಯ ಸಾಹಿತಿಗಳ ಸಮಾಗಮಾ ಕಾರ್ಯಕ್ರಮವೂ ಜಿಲ್ಲೆಯಲ್ಲಿ ನಡೆದಿತ್ತು.

ವಿಚಾರವಾದಿ ಯೋಗಿಶ್ ಮಾಸ್ಟರ್ ಸೇರಿದಂತೆ ಗೌರಿ ಲಂಕೇಶ್ ಸಹ ಬೆಣ್ಣೆ ನಗರಿಗೆ ಅವಿನಾಭಾವ ಸಂಬಂಧವಿದೆ.. ಅಂತೆಯೇ ಬರಗೂರು ರಾಮಚಂದ್ರಪ್ಪರಿಗೂ ಸಹ ಇಲ್ಲಿ ನಂಟಿದ್ದು, ಹರಿಹರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ ಮತ್ತು ಕವಿಗೋಷ್ಟಿ ಏರ್ಪಡಿಸಲಾಗಿತ್ತು.

ಅಂತೆಯೇ ಬರಗೂರು ಆರಾಮವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಗರದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರಕ್ಕೆ ಮರಳಿದರು. ಅಲ್ಲಿ ಇದ್ದಕ್ಕಿದ್ದಂತೆ ತಮ್ಮ ಕೊಠಡಿಯಲ್ಲಿ ಕುಸಿದು ಬಿದ್ದರು. ಭಾನುವಾರ ಮಧ್ಯಾಹ್ನ 2.30ಕ್ಕೆ ಘಟನೆ ನಡೆದಿದೆ. ಅಲ್ಲೇ ಇದ್ದ ಸ್ಥಳದಲ್ಲಿದ್ದ ಸಂಘಟಕರು ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈಗ ಆರೋಗ್ಯ ಸುಧಾರಿಸುತ್ತಿದೆ. ಬರಗೂರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದಾಗ ರಕ್ತದ ಒತ್ತಡದಲ್ಲಿ ಏರುಪೇರು ಉಂಟಾಗಿದೆ. ಯಾವ ತೊಂದರೆಯೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ನಂತರ ಬರಗೂರು ಚೇತರಿಸಿಕೊಂಡರು. ಬಳಿಕ ದಾವಣಗೆರೆ ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಲಾಯಿತು.

ನನಗೆ ಏನೂ ಆಗಿಲ್ಲ..ಸುಸ್ತು ಮಾತ್ರ ಇದೆ..ವೈದ್ಯರು ಇಸಿಜಿ ಮಾಡಿದ್ದಾರೆ..ಯಾವುದೇ ತೊಂದರೆಯಿಲ್ಲ.. ನಾನು ಬೆಂಗಳೂರಿಗೆ ಹೊರಟಿದ್ದೇನೆ.. ನನಗೆ ಏನೂ ಆಗಿಲ್ಲ..ನಾನು ಆರಾಮವಾಗಿದ್ದೇನೆ..ಬಿಪಿ, ಶುಗರ್ ನನಗೆ ಮೊದಲಿನಿಂದಲೂ ಈಗಲೂ ಇಲ್ಲ.. ಎಲ್ಲ ಚೆಕ್ ಮಾಡಲಾಗಿದೆ.. ಹೆಚ್ಚಿನ ಚಿಕಿತ್ಸೆ ಬೇಕಿಲ್ಲಘಿ..ನನ್ನ ಬಗ್ಗೆ ಯಾರು ಆತಂಕ ಬೇಡ ನಾನು ಆರಾಮವಾಗಿದ್ದೇನೆ…ನನಗೆ ಏನೂ ಆಗಿಲ್ಲ.. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!