ಬೆಂಕಿಗಾಹುತಿಯಾದ ಹತ್ತು ಲೋಡ್ ಹುಲ್ಲಿನ ಬಣವೆ.!

ದಾವಣಗೆರೆ: ದಾವಣಗೆರೆ ತಾಲ್ಲೂಕು ಅವರಗೊಳ್ಳ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸುಮಾರು ಹತ್ತು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮವಾಗಿದೆ. ಶಿವಾನಂದಪ್ಪ ಎಂಬುವವರ ಕಣದಲ್ಲಿ ಸಂಜೆ ನಾಲ್ಕು ಗಂಟೆ ವೇಳೆಗೆ ಕಾಣಿಸಿಕೊಂಡ ಬೆಂಕಿ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸುವಷ್ಟರಲ್ಲೆ ಹತ್ತು ಲೋಡ್ ನಷ್ಟು ಹುಲ್ಲು ಹೊತ್ತಿ ಉರಿದಿತ್ತು. ಮಾಹಿತಜ ತಿಳಿದ ತಕ್ಷಣ ಗ್ರಾಮಕ್ಕೆ ದೌಡಾಯಿಸಿ ದ ಅಗ್ನಿಶಾಮಕ ಸಿಬ್ಬಂದಿಗಳು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

 
                         
                       
                       
                       
                       
                       
                       
                      